ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆಹಾನೆ ಅಖಂಡ ಗುರುತಾನೆ ಬೇಕಯೆಂದವರಿಗೆ ಪೂರ್ಣ ಸಿಕ್ಕುತಾನೆ P
ಅರವ್ಹಿನ ಮುಂಧಾನೆ ಮರವ್ಹಿನ ಹಿಂಧಾನೆ ಕುರಹು ತಿಳಿದರೆ ತಾನೆ ಸ್ಥಿರವಾಗ್ಯಾನೆ 1
ಗುರುತ ಕಂಡವಘಾನೆ ಗುರುಸ್ವರೂಪಧ್ಯಾನೆ ಗುರುಕೃಪ್ಯಾದವಘಾನೆ ಗುರುತಾನೆ 2
ಅಣುರೇಣುದೊಳಘಾನೆ ಜನವನ ತುಂಬ್ಯಾನೆ ಅನುಭವಕ ತಾನೆ ಖೂನಾಘ್ಯಾನೆ 3
ಮನದ ಕೊನಿಲಿಹಾನೆ ಘನವೆ ಘನವಾಘ್ಯಾನೆ ದೀನ ಮಹಿಪತಿ ಸ್ವಾಮಿ ತಾನೆ ತಾನೆ4
***