Showing posts with label ಆನಿ ಬಂತಿದೆಕೋ ಮಹ ಮದ್ದಾನಿ ಬಂತಿದಕೋ mahipati. Show all posts
Showing posts with label ಆನಿ ಬಂತಿದೆಕೋ ಮಹ ಮದ್ದಾನಿ ಬಂತಿದಕೋ mahipati. Show all posts

Wednesday, 1 September 2021

ಆನಿ ಬಂತಿದೆಕೋ ಮಹ ಮದ್ದಾನಿ ಬಂತಿದಕೋ ankita mahipati

 ಆನಿ ಬಂತಿದೆಕೋ ಮಹ ಮದ್ದಾನಿ ಬಂತಿದಕೋ| 

ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ| ತಾನಿಡುವುತೊಲಿವುತಲಿ ನೋಡಮ್ಮಾ ಪ 

ಕರಿಯ ಬಣ್ಣದ ಲೊಪ್ಪತಾ | ಕಿರಿಗುದಲು | ಸಿರದಲೀ ಹೊಳೆವುತಾ | ಪೆರೆನೊಸಲೊಳು ಕೇಶರದ ಕಸ್ತೂರಿ ರೇಖೆ | ಕರುಣ ಭಾವದ ಕಂಗಳು ನೋಡಮ್ಮಾ 1 

ಝಳ ಝಳಿಪಂಬರದೀ | ಝಣ ಝಣಲೆಂಬಾ | ವಲಿದು ತನ್ನಯನಿಜ ಶರಣರ ಅನುಮತ | ದಲಿ ನಲಿದಾಡುತಲೀ | ನೋಡಮ್ಮಾ 2 

ದುಷ್ಟಜನರು ತೊಲಗೀ | ಯನುತ ಮುಂದ | ಶಿಷ್ಟಭಟಿರುವದಗೀ | ಅಟ್ಟಹಾಸದಿ ಬಂದರಿದೇ | ಮಹಿಪತಿ ಜನ | ಇಷ್ಟ ದೈವತ ಎನಿಪಾ ನೋಡಮ್ಮಾ 3

***

ಕಾಖಂಡಕಿ ಶ್ರೀ ಕೃಷ್ಣದಾಸರು

ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ ತಾನಿಡು ತೊಲವುತಲಿ ನೋಡಮ್ಮ 

ಧ್ರುವ ಕರಿಯ ಬಣ್ಣದಲೊಪ್ಪುತ ಕಿರಿಗೂದÀಲು ಶಿರದಲಿ ಹೊಳೆವುತ ಪೆರೆನೊಸಲೊಳು ಕೇಸರದ ಕಸ್ತೂರಿ ರೇಖೆ ಕರುಣ ಭಾವದ ಕಂಗಳು ನೋಡಮ್ಮ 1 

ಝಳಝಳಿಪಂಬರದಿ ಫಣ ಫಣವೆಂಬ ಚೆಲುವ ಗಂಟÉಯರವದಿ ಒಲಿದು ತನ್ನಯ ನಿಜ ಶರಣರ ಅನುಮತ ದಲಿ ನಲಿದಾಡುತಲಿ ನೋಡಮ್ಮ 2 

ದುಷ್ಟ ಜನರು ತೊಲಗಿ ಎನುತ ಮುಂದೆ ಶಿಷ್ಟ ಜನರು ಒದಗಿ ಅದ್ದಹಾಸದಿ ಬಂದರಿದೆ ಮಹಿಪತಿ ಜನ ಇಷ್ಟದೈವತ ಎನಿಪ ನೋಡಮ್ಮ 3