Showing posts with label ಏನು ನೋಡಿತ್ತ ನೀ ವರಕೆ ಮಗಳಾ pranesha vittala. Show all posts
Showing posts with label ಏನು ನೋಡಿತ್ತ ನೀ ವರಕೆ ಮಗಳಾ pranesha vittala. Show all posts

Sunday, 17 November 2019

ಏನು ನೋಡಿತ್ತ ನೀ ವರಕೆ ಮಗಳಾ ankita pranesha vittala

ಪ್ರಾಣೇಶದಾಸರು
ಶ್ರೀ ಪ್ರಾಣೇಶದಾಸರ ಸಂಪ್ರದಾಯದ ಹಾಡುಗಳು
ಶ್ರೀದೇವರ ವಿವಾಹ ಮಹೋತ್ಸವದ ಪದಗಳು

ಏನು ನೋಡಿತ್ತ ನೀ ವರಕೆ ಮಗಳಾ |ಹೀನವಳಿತೆನ್ನದಲೆ ತ್ವರದಿ ಜಲನಿಧಿಯೂ ಪ

ಕಪ್ಪು ರೂಪವು ಇವನ ನೆಲಿ ಒಬ್ಬರರಿಯರೂ |ಸರ್ಪಶಯನನು ತಿರಿದುಕೊಂಡು ತಿಂಬಾ ||ಮುಪ್ಪಿನವ ಇವ ಹುಟ್ಟಿದುದನಾರು ಬಲ್ಲವರು |ತಪ್ಪಿ ಕೊಟ್ಟನೆ ಎಲ್ಲರನುಜರಿದುಹೀಂಗೇ 1

ಕದ್ದು ಪೊಟ್ಟೆಯ ಪೊರೆವ ಎಂಜಲೆನ್ನದೆ ತಿಂಬ |ಹದ್ದನೇರುವ ಅಡವಿಯೊಳು ಚರಿಸುವಾ ||ಬುದ್ಧಿಹೀನರ ತೆರದಿ ಹಡದವಳ ಶಿರ ಕಡಿದ |ಸದ್ಯ ವಸನವ ಕಳದು ಬತ್ತಲಿರುವವಗೇ 2

ಹೇಸಿಕಿಲ್ಲದೆ ಕರಳ ಮಾಲಿಕಿಯ ಹಾಕಿಹನು |ದೋಷಕಂಜನು ಜಾರತನವ ಮಾಳ್ಪಾ ||ದಾಸನಂದದಿ ಬಲಿಯ ಮನಿಯ ಬಾಗಿಲ ಕಾಯ್ದ |ಆ ಸವ್ಯಸಾಚಿ ತೇರಿಗೆ ಸೂತನಾದವಗೆ 3

ಹೆಣ್ಣುಗಳ ಅಂಬರವ ಕೊಂಡು ಮರನೇರುವನು |ತನ್ನ ಮಕ್ಕಳ ತಾನೆ ಹತಗೈಸುವಾ ||ಮಣ್ಣನೂ ಬೆಂಕಿಯನು ತಿಂಬ ವಾವಿಯನರಿಯ |ತನ್ನ ಪುತ್ರರಿಗೆ ತನ್ನಯ ಮಕ್ಕಳಿತ್ತವಗೆ 4

ಪ್ರಾಣೇಶ ವಿಠಲನಲ್ಲಿಹವಿಂಥ ಸುಗುಣಗಳು |ತಾನೊಂದು ಪೂರ್ತಿ ತಿಳಿಯನು ಸಮುದ್ರಾ ||ಶ್ರೀ ನಾರಿಯನು ಕೊಟ್ಟ ಅವನ ಬುದ್ಧಿಯೊ ಅಥವ |ಏನು ವ್ರತ ಸೇವಿಸಿದ್ದಳೊಕಮಲಮಂದಿರಿಯು 5
******