Showing posts with label ಧನು ಮುರಿದ ಶ್ರೀರಾಮ purandara vittala. Show all posts
Showing posts with label ಧನು ಮುರಿದ ಶ್ರೀರಾಮ purandara vittala. Show all posts

Monday, 12 April 2021

ಧನು ಮುರಿದ ಶ್ರೀರಾಮ purandara vittala

 ರಾಗ - : ತಾಳ -


ಧನು ಮುರಿದ ಶ್ರೀರಾಮ l ಶೌರ್ಯವನೇ ತಾ ತೋರಿ ll ಪ ll


ಜನಕನಾ ಸಭೆಯಲ್ಲಿ ಜಾನಕಿಯ ಮನಸೆಳೆದು ll ಅ ಪ ll


ವಸುಧೀಶರೆಲ್ಲರು ಹಸಗೆಟ್ಟು ಕುಳಿತಿರಲು l

ದಶಕಂಠ ಧನುವೆತ್ತಿ ಬಸವಳಿದು ಬಿದ್ದ ll

ಪಸರಿಸಿತು ಹಾಸ್ಯ ಧ್ವನಿ ನೆರೆದ ಸಭೆಯೊಳಗೆಲ್ಲ l

ನಸುನಕ್ಕು ವಿಶ್ವಾಮಿತ್ರ ರಾಮನೆಬ್ಬಿಸಿದ ll 1 ll


ಶ್ಯಾಮಸುಂದರನೆದ್ದು ಪ್ರೇಮದಿಂದ ಮುನಿಗೆರಗಿ l

ಆ ಮಹಾ ಧನುವಿದ್ದ ಸ್ಥಳಕೆ ತಾ ಬಂದ ll

ಕೋಮಲ ಕರಗಳಿಂದ ಧನುವೆತ್ತಿ ತಾ ಪಿಡಿದ l

ಸಾಮರ್ಥ್ಯದಿಂದೆಳೆದ ಧನು ಮುರಿದು ಎರಡಾಯ್ತು ll 2 ll


ಜಯವಾಯ್ತು ರಾಮಗೆಂದು ಜಯಭೇರಿ ಮೊಳಗಲು l

ಜಯ ಜಯ ಜಯವೆಂದು ಸುರರು ಹೂವ ಮಳೆಗರೆದು ll

ಜಯಮಾಲೆ ಹಾಕಿದಳು ಜಾನಕಿಯು ಓಡಿ ಬಂದು l

ಜಯ ಪಡೆದು ನಿಂತಿಹ ಪುರಂದರವಿಟ್ಠಲ ll 3 ll

***