Showing posts with label ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ gurumahipati. Show all posts
Showing posts with label ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ gurumahipati. Show all posts

Wednesday 1 September 2021

ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ಪ 


ಭೂತಳದೊಳರವು ಸಕಲ ಉಂಟೆಂದು ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ ಮಾತಿಗೆ ವಿಗತ ಕಗತ ವಾಗೆ ಶೃತಿಗಳು ನೇತಿ ನೇತಿ ತಿರುಗಿದ ಬಳಿಕಾ 1 

ಕುಸುಮನಾಭೇನನ ಸಾಮೀಪೆಂಬಾ ತವಕದಿ ಅಸಮ ತೆರದಿ ಪೊಗಳಲು ಚರಿತಾ ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ ಕುಶಿದು ತಲೆವಾಗಿ ತಾ ನಾಚಿದ ಬಳಿಕ2 

ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ ವರತ ಹೃದಯ ಮಂದಿರದೊಳಿರಿಸಿ ಮೆರವುತ ನಿನಗತಿ ಬ್ರಯರಾದಾ ಭಕುತರಾ ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ3

***