Showing posts with label ನೋಡಿ ನೋಡಿ ನಿಮ್ಮೊಳು ನಿಜ ಘನವ mahipati. Show all posts
Showing posts with label ನೋಡಿ ನೋಡಿ ನಿಮ್ಮೊಳು ನಿಜ ಘನವ mahipati. Show all posts

Thursday, 12 December 2019

ನೋಡಿ ನೋಡಿ ನಿಮ್ಮೊಳು ನಿಜ ಘನವ ankita mahipati

kaapi ರಾಗ ತೀನ್ ತಾಳ

ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ||

ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ
ಆದಿ ಅನಾದಿಯ ಪಥವ ನೋಡಿ ||೧||

ಭೂಚರ ಖೇಚರ ಜಲಚರ ಗೋಚರ
ಅಲಕ್ಷ ಮುದ್ರೆಯ ಸ್ಥಾನ ನೋಡಿ ||೨||

ಪರಾಪಶ್ಯಂತಿಯ ಮಧ್ಯಮ ವೈಖರಿ
ವೇದಾಂತಾಕರದ ಸಾರ ನೋಡಿ ||೩||

ಪಂಚತತ್ವದ ಗತಿ ಪಂಚಪ್ರಾಣದ ಸ್ಥಿತಿ
ಪಂಚ ಕರುಣಾಕೃತಿ ಗತಿ ನೋಡಿ ||೪||

ಸ್ಥೂಲಸೂಕ್ಷ್ಮ ಕಾರಣ ಮಹಾಕಾರಣ ನೋಡಿ
ಆನಂದಗತಿಯಲಿ ಬೆರೆದಾಡಿ ||೫||

ಅಕ್ಷರಕ್ಷರವು ಶಬ್ದನಿಶ್ಶಬ್ದವು ಶೂನ್ಯ ಮಹಾ-
ಶೂನ್ಯ ನಿಶ್ಶೂನ್ಯ ನೋಡಿ ||೬||

ಮಹಿಪತಿ ಸ್ವಾಮಿ ಶ್ರೀಗುರು ಸರ್ವೋತ್ತಮನ ನೋಡಿ
ಆನಂದಗತಿಯಲಿ ಬೆರೆದಾಡಿ ||೭||
****

ನೋಡಿ ನೋಡಿ ನಿಮ್ಮೊಳು ನಿಜಘನವ ಪ 


ಆಧಾರ ದೃಢದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವು ನೋಡಿ 1 

ಭೂಚರ ಖೇಚರಚಾಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ 2 

ಪರಾಪಶ್ಯಂತಿಯು ಮಧ್ಯಮ ವೈಖರಿ ಸಾರ ನೋಡಿ3 

ಪಂಚತತ್ವದ ಗತಿ ಪಂಚಪ್ರಾಣವದ ಸ್ಥಿತಿ ಪಂಚಕರುಣಾಕೃತಿ ಗತಿ ನೋಡಿ 4 

ಸ್ಥೂಲ ಸೂಕ್ಷ್ಮಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ 5 

ಶೂನ್ಯ ಮಹಾ ಶೂನ್ಯ ನಿಶ್ಯೂನ್ಯ ನೋಡಿ 6 

ಮಹಿಪತಿಸ್ವಾಮಿ ಶ್ರೀಗುರು ಸರ್ವೋತ್ತಮ ನೋಡಿ ಆನಂದಗತಿಯಲಿ ಬೆರೆದಾಡಿ 7


***