ಶುಕ್ರವಾರ ಮುತ್ಸಂಜೆ ಹೊತ್ನಲ್ಲಿ ಲಕ್ಷಿ
SHUKRAVARA MUTSANJE HOTNALLI LAKSHMI
-no ankita
ಶುಕ್ರವಾರ ಮುತ್ಸಂಜೆ ಹೊತ್ನಲ್ಲಿ
ಲಕ್ಷ್ಮಿ ಬರುವಳು ನೋಡೆ ಕದವ ತೆರೆ
ಆಸರೆ ಕೊಡಿಸುತ್ತ ಆಸೆಯ ಬಿಡಿಸುತ್ತಾ
ದೋಷವ ಕಳೆವಳು ಶ್ರೀಶ ಪ್ರಿಯೇ
ವಾಸವ ಪೂಜಿಪ ವಾರಿಜಾಸನ ಮಾತೆ
ವರತುಂಬಿ ತರುವಳು ಕದವ ತೆರೆ
ಮಳೆ ಬೆಳೆ ನೀಡುತ್ತಾ ಇಳೆಯನ್ನು ತೆರೆವಳು
ನಳಿನನಾಭನ ರಾಣಿ ಶ್ರೀ ರುಕ್ಮಿಣೀ
ಚರಣದ ಪಿಡಿದಂತ ಶರಣರ ಸಲಹಲು
ಸರಸರನೆ ಬರುವಳು ಕದವ ತೆರೆ
ಸುಮತಿ ಸೌಬಾಗ್ಯವ ನೀಡುವ ಮಂಗಳೆ
ಸರಸಿಜನಾಭನ ಹೃದಯಸದನೆ
ಸೆರೆಗೊಡ್ಡಿ ಬೇಡಿದರೆ ಉಡಿತುಂಬಿ ವರಗಳ
ಇಡಿಇಡಿ ಕೊಡುವಳು ಕದವತೆರೆ
****Just scroll down for other devaranama