Monday 30 December 2019

ಶುಕ್ರವಾರ ಮುತ್ಸಂಜೆ ಹೊತ್ನಲ್ಲಿ ಲಕ್ಷಿ others SHUKRAVARA MUTSANJE HOTNALLI LAKSHMI


ಶುಕ್ರವಾರ ಮುತ್ಸಂಜೆ ಹೊತ್ನಲ್ಲಿ ಲಕ್ಷಿ 
SHUKRAVARA MUTSANJE HOTNALLI LAKSHMI
-no ankita




ಶುಕ್ರವಾರ ಮುತ್ಸಂಜೆ ಹೊತ್ನಲ್ಲಿ 
ಲಕ್ಷ್ಮಿ ಬರುವಳು ನೋಡೆ ಕದವ ತೆರೆ 

ಆಸರೆ ಕೊಡಿಸುತ್ತ ಆಸೆಯ ಬಿಡಿಸುತ್ತಾ 
ದೋಷವ  ಕಳೆವಳು  ಶ್ರೀಶ ಪ್ರಿಯೇ
ವಾಸವ ಪೂಜಿಪ ವಾರಿಜಾಸನ ಮಾತೆ
ವರತುಂಬಿ ತರುವಳು ಕದವ ತೆರೆ

 ಮಳೆ ಬೆಳೆ ನೀಡುತ್ತಾ ಇಳೆಯನ್ನು ತೆರೆವಳು
 ನಳಿನನಾಭನ ರಾಣಿ ಶ್ರೀ ರುಕ್ಮಿಣೀ
 ಚರಣದ  ಪಿಡಿದಂತ  ಶರಣರ ಸಲಹಲು
 ಸರಸರನೆ ಬರುವಳು ಕದವ ತೆರೆ 

ಸುಮತಿ ಸೌಬಾಗ್ಯವ ನೀಡುವ ಮಂಗಳೆ 
ಸರಸಿಜನಾಭನ ಹೃದಯಸದನೆ
ಸೆರೆಗೊಡ್ಡಿ  ಬೇಡಿದರೆ ಉಡಿತುಂಬಿ ವರಗಳ
ಇಡಿಇಡಿ  ಕೊಡುವಳು ಕದವತೆರೆ 
****

Just scroll down for other devaranama

No comments:

Post a Comment