Showing posts with label ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ mahipati. Show all posts
Showing posts with label ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ mahipati. Show all posts

Wednesday, 1 September 2021

ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ ankita mahipati

 ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ pa


ಪರಿಪರಿ ಅಡಿಸಿದಿ ನೀ ಪರನಾರಿಜಾರ ಮರುಳು ಮಾಡಿದಿ ನಮ್ಮ ಗೊಲ್ಲತೇರ ಕರಗೂಡುತಲಿ ತಿಂದ್ಯೋ ನೀ ಪಾಲ್ಮೊಸರ ಆರಿಗೆ ಹೇಳಬೇಕು ನಿನ್ನ ದೂರ 1 

ಮಾಡದ ಮಾಡಿದಿ ನೀ ಮನಬಂದ್ಹಾಂಗೆ ಪಡೆದು ಲೋಕದಲುಸುರಗುಡದ್ಹಾಂಗೆ ಹಿಡಿದೇನಂದರ ನೀ ಕೈಗೂಡಿ ಬ್ಯಾಗೆ ತುಡುಗತನ ಮಾಡಿದಿ ನಿನಗಕ್ಕು ಹಾಂಗೆ 2 

ಬಿಡಲರಿ ಯೆವು ನಿನ್ನ ತಿಳಿಕೊ ವಿಚಾರ ಮಾಡಲಿಕ್ಕಾಗದು ಇದಕೆ ತಾ ಪರಿಹಾರ ಹಿಡಿದೇವು ನಿನ್ನಾಟ ಕಂಡು ಕಣ್ಣಾರ ಮೂಢ ಮಹಿಪತಿಗಾಯಿತು ತಾ ಮನೋಹರ 3

***