Showing posts with label ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ tandevenkatesha vittala. Show all posts
Showing posts with label ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ tandevenkatesha vittala. Show all posts

Monday, 6 September 2021

ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಕಾಂಬೊಜಿ ತಾಳ: ಆದಿ


ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ


ನಂದಸಮಯಮಕರಂದಪರಿಮಳದಿ

ಮಂದಹಸಿತ ಮನಮಂದಿರಕಿಂದು ಅ.ಪ


ಭಾವದೀಪ ಖಂಡಾರ್ಥಮುಕ್ತಾವಳಿ

ಆ ವಿವೃತ್ತಿ ಮಂತ್ರಾರ್ಥಸುದೀಪಿಕ

ಭಾವುಕವೈಷ್ಣವ ಸಾರಸಂಗ್ರಹ ಪ್ರ-

ಭಾವಕುಸುಮಮಯತತ್ತ್ವಮಂಜರಿವೊಲ್ 1

ಕಾಮಧೇನು ಸ್ವರ್ಪಾದಪ ಸಚ್ಚಿಂ-

ತಾಮಣಿಗಿಂ ಮಿಗಿಲೆನಿಸಿದ ಸೌಖ್ಯ

ಸ್ತೋಮ ಕರುಣಿಸೆ ವರಾಹಜೆತೀರದಿ

ಧಾಮಗೈದಿಹ ಸುತ್ರಾಮೋಪಮಮುನಿ 2

ಭೂಷ ಭೂತಿ ಸಂತೋಷ ತಂದೆವೆಂಕ-

ತೇಶವಿಠಲ ನಾಮ 

ಘೋಷಕಗವಿರತ ಮೀಸಲಿರುವ ಸಂ-

ದೇಶ ಕರುಣಿಸೆ ಕೃಪಾಸಮುದ್ರಗುರು 3

***