Showing posts with label ಎಂಥಾ ದಯವಂತರೋ ಮಂತ್ರ ನಿವಾಸರೋ harikadalagirish. Show all posts
Showing posts with label ಎಂಥಾ ದಯವಂತರೋ ಮಂತ್ರ ನಿವಾಸರೋ harikadalagirish. Show all posts

Monday, 6 September 2021

ಎಂಥಾ ದಯವಂತರೋ ಮಂತ್ರ ನಿವಾಸರೋ ankita harikadalagirish

 ankita ಹರಿಕಡಲಗಿರೀಶ 

ರಾಗ: [ಸಿಂಧುಬೈರವಿ] ತಾಳ: [ಆದಿ]


ಎಂಥಾ ದಯವಂತರೋ ಮಂತ್ರ ನಿವಾಸರೋ

ಕಂತು ಜನಕನ ಚರಣ ಕಮಲದ ಚಿಂತನೆಯಲ್ಲಿರುವಂಥವರೋ

ರಾಘವೇಂದ್ರ ರಾಯರೋ ಭೋಗೀಯ ಅಂಶಜರೋ

ಭಾಗವತರಿಗೀಶರೋ ಭಾನುಪ್ರಕಾಶರೋ 1

ಕುಷ್ಟರೋಗವ ಕಳೆಯುವರೋ ದುಷ್ಟರ ಸಂಗ ಬಿಡಿಸುವರೋ

ಶಿಷ್ಟರ ಸಂಗದೋಳಿರಿಸುವರೋ ಇಷ್ಟ ಫಲಪ್ರದಾತರೋ 2

ಹರಿತತ್ತ್ವದ ವಿಚಾರವ ಮಾಡುತ ಹರಿ ಮಹಿಮೆಯನು ಪೇಳಿದರೋ

ಹರಿಕಡಲಗಿರೀಶನ ಕಂಬದಿ ಸುರರಿಗೆಲ್ಲಾ ತೋರಿದರೋ 3

***