ankita ಹರಿಕಡಲಗಿರೀಶ
ರಾಗ: [ಸಿಂಧುಬೈರವಿ] ತಾಳ: [ಆದಿ]
ಎಂಥಾ ದಯವಂತರೋ ಮಂತ್ರ ನಿವಾಸರೋ
ಕಂತು ಜನಕನ ಚರಣ ಕಮಲದ ಚಿಂತನೆಯಲ್ಲಿರುವಂಥವರೋ ಪ
ರಾಘವೇಂದ್ರ ರಾಯರೋ ಭೋಗೀಯ ಅಂಶಜರೋ
ಭಾಗವತರಿಗೀಶರೋ ಭಾನುಪ್ರಕಾಶರೋ 1
ಕುಷ್ಟರೋಗವ ಕಳೆಯುವರೋ ದುಷ್ಟರ ಸಂಗ ಬಿಡಿಸುವರೋ
ಶಿಷ್ಟರ ಸಂಗದೋಳಿರಿಸುವರೋ ಇಷ್ಟ ಫಲಪ್ರದಾತರೋ 2
ಹರಿತತ್ತ್ವದ ವಿಚಾರವ ಮಾಡುತ ಹರಿ ಮಹಿಮೆಯನು ಪೇಳಿದರೋ
ಹರಿಕಡಲಗಿರೀಶನ ಕಂಬದಿ ಸುರರಿಗೆಲ್ಲಾ ತೋರಿದರೋ 3
***
No comments:
Post a Comment