Showing posts with label ಆಮಹಿಮಗೆ ಮಂಗಳಾರತಿಯ ಎತ್ತಿದರು ಮತ್ಸ್ಯಾವತಾರ ಶ್ರೀ ankita hayavadana AA MAHIMAGE MANGALAARATIYA ETTIDARU MATSYAVATARA SRI. Show all posts
Showing posts with label ಆಮಹಿಮಗೆ ಮಂಗಳಾರತಿಯ ಎತ್ತಿದರು ಮತ್ಸ್ಯಾವತಾರ ಶ್ರೀ ankita hayavadana AA MAHIMAGE MANGALAARATIYA ETTIDARU MATSYAVATARA SRI. Show all posts

Tuesday, 9 November 2021

ಆಮಹಿಮಗೆ ಮಂಗಳಾರತಿಯ ಎತ್ತಿದರು ಮತ್ಸ್ಯಾವತಾರ ಶ್ರೀ ankita hayavadana AA MAHIMAGE MANGALAARATIYA ETTIDARU MATSYAVATARA SRI



ಆ ಮಹಿಮಗೆ ಮಂಗಳಾರತಿಯ ಎತ್ತಿದರು ||

ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು
ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ ||

ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು
ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ ||

ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು
ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ ||

ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು
ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ ||

ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು
ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ ||

ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು
ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ ||

ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು
ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ ||

ಗೋಪಿ ಮುದ್ದಾಡಿದ ಬೆಳಕು
ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ ||

ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು
ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ ||

ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು
ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ ||
***

A mahimage mangalaratiya ettidaru ||

Matsyavatara srihariya akshagangaladondu belaku
Nityavedava tanda belaku tumbitu dvaravatige ||

Kurmavatara srihariya hemagiriya tanda belaku
Ballida kayanna belaku tumbitu dvaravatige ||

Varahavatara srihariya holeda koredadeya belaku
Dharuniya negavida belaku tumbitu dvaravatige ||

Naramrugarupa srihariya merevo nakada belaku
Urigannu jvaleya belaku tumbitu dvaravatige ||

Vamanavatara srihariya bumiyanaledondu belaku
Balaka tanayana belaku tumbitu dvaravatige ||

Bargavavatara srihariya mereévo balubujadondu belaku
Durula kshatre;ra gedda belaku tumbitu dvaravatige ||

Dasarathatanaya srihariya esevo billubanada belaku
Sasivadaneya tanda belaku tumbitu dvaravatige ||

Gopi muddadida belaku
Devakkitanayana belaku tumbitu dvaravatige ||

Bauddhavatara srihariya buddhipallatadondu belaku
Rudranna gelidondu belaku tumbitu dvaravatige ||

Kalkyavatara srihariya holevakandadondu belaku
Guru hayavadananna belaku tumbitu dvaravatige ||
***


ಶ್ರೀ ಮಹಾಲಕ್ಷುಮಿವಲ್ಲಭಗೆ ಕಾಮಿತಫಲದಾಯಕಗೆ

ಆ ಮಹಿಮಗೆ ಮಂಗಳಾರತಿಯ ಎತ್ತಿದರು 1


ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು

ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ 2


ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು

ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ 3


ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು

ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ 4


ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು

ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ 5


ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು

ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ 6


ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು

ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ 7


ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು

ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ 8


ಗೋವಳರಾಯ ಶ್ರೀಹರಿಯ ಗೋಪಿ ಮುದ್ದಾಡಿದ ಬೆಳಕು

ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ 9


ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು

ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ 10


ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು

ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ 11

***