Audio by Vidwan Sumukh Moudgalya
ಶ್ರೀ ಪ್ರಸನ್ನವೆಂಕಟದಾಸರ ರಚನೆ (ಲಕ್ಷ್ಮೀದೇವಯನ್ನು ಕುರಿತು)
ರಾಗ : ವಲಚಿ ಆದಿತಾಳ
ಸಾಗರಶಯನನ ರಾಣಿ ತ್ರಿವೇಣಿ ॥ಪ॥
ಬಾಗುವೆ ಚರಣಕೆ ಕಾಯೆ ಕಲ್ಯಾಣಿ ॥ಅ.ಪ॥
ನೀಗತಿಯೆಂದಾಗತಾಗತ ನಂಬಲು ।
ಬೇಗನೆ ಬಂದು ಪೊರೆವದಳು॥
ಈಗೇತಕೆ ತಾಯ್ಮಗನ ಸಲುಹಲು।
ಮೊಗವೆತ್ತದೆ ಈ ಪರಿ ಕುಳಿತಿರುವಿ ॥೧॥
ಶ್ರೀಭೂದುರ್ಗೆಯರೂಪತಳೆದು ಹರಿ।
ಈ ಭವಜರಿಗೆ ಕಾಣದ ತೆರದಲಿ॥
ಅಭುಜೆಗೈದ ಮಹಾಮಾಯೆ ವಿಭಾವರಿ।
ಭೂಭಾರ್ಗವಿಯೆ ಜಾಂಬೂನದಾಂಬರಿ ॥೨॥
ಆರು ಮೂರು ಪ್ರಖರಾಗಮ ಕ್ಷೇತ್ರದೆ।
ಸಾರ ಶಾಸ್ತ್ರಕ್ರಮ ಪೂಜೆಗೊಳ್ಳುವೆ॥
ಆರುನಾಲ್ಕು ತತ್ವಾಧಿಕ ದೇವಿಯೆ।
ಸ್ಮರಪಿತ ಶ್ರೀಪ್ರಸನ್ವೆಂಕಟನರಾಣಿಯೆ ॥೩॥
**********