kruti by bhupati vittalaru ( kakhandaki Ramacharyaru)
ಪ್ರಣಾಮ ಗಣರಾಯಾ ಪ್ರವೀಣಾ ಪ
ಪ್ರಥಮ ಪ್ರಣಾಮವ ಮೂಡಿ ಬೇಡುವೆವಿಘ್ನರಾಜ ನೀ ನೀಡೆಮಗಭಯಾಅ.ಪ
ಪಾಶಾಂಕುಶಧರ ಮೂಷಕವಾಹನಕೇಶರಗಂಧ ವಿಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ 1
ಏಕ ವಿಂಶತಿ ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು 2
ಸಿದ್ಧಿ ವಿನಾಯಕಾ ವಿದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿವಿಠ್ಠಲಪ್ರಿಯಾ 3
***