ಪುರಂದರದಾಸರು
ಸಜ್ಜನರ ಸಂಗ ನಮಗೆಂದಿಗಾಗುವುದೊ
ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ||
ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕು-ಶೂಲಗಳಿಂದ ನೆಡುವರು, ಪರರನೀ
ಪೋಕು ಮಾನವರಿಂದ ನೊಂದೆ ಹರಿಯೇ ||
ತಾವೇ ತಮ್ಮನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿಯುವರು ಪರರ
ಭಾವಿಸಲರಿಯರು ಗುರುಹಿರಿಯರ-ನಿಂಥ
ಹೇಯ ಮನುಜರಿಂದ ನೊಂದೆ ಹರಿಯೇ ||
ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ ||
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಟಿ ಸಟೆಯೆಂಬರು , ಇಂಥ
ಮತ್ತ ಮನುಜರಿಂದ ನೊಂದೆ ಹರಿಯೇ ||
ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಬಡುವ ಕೈ ಮೇಲಾಗಿ
ಸೃಷ್ಟಿಗೊಡೆಯ ಶ್ರೀಪುರಂದರವಿಠಲನ
ಮುಟ್ಟಿ ಭಜಿಸಬೇಕು ಭ್ರಷ್ಟ ಮನವೇ ಇನ್ನು ||
***
ಸಜ್ಜನರ ಸಂಗ ನಮಗೆಂದಿಗಾಗುವುದೊ
ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ||
ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕು-ಶೂಲಗಳಿಂದ ನೆಡುವರು, ಪರರನೀ
ಪೋಕು ಮಾನವರಿಂದ ನೊಂದೆ ಹರಿಯೇ ||
ತಾವೇ ತಮ್ಮನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿಯುವರು ಪರರ
ಭಾವಿಸಲರಿಯರು ಗುರುಹಿರಿಯರ-ನಿಂಥ
ಹೇಯ ಮನುಜರಿಂದ ನೊಂದೆ ಹರಿಯೇ ||
ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ ||
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಟಿ ಸಟೆಯೆಂಬರು , ಇಂಥ
ಮತ್ತ ಮನುಜರಿಂದ ನೊಂದೆ ಹರಿಯೇ ||
ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಬಡುವ ಕೈ ಮೇಲಾಗಿ
ಸೃಷ್ಟಿಗೊಡೆಯ ಶ್ರೀಪುರಂದರವಿಠಲನ
ಮುಟ್ಟಿ ಭಜಿಸಬೇಕು ಭ್ರಷ್ಟ ಮನವೇ ಇನ್ನು ||
***
pallavi
sajjanara sanga namagendigAhudO durjanara sangadinda nonde hariye
caraNam 1
tAve tamma tutisi kombaru hEvavillade jarivaru parara
bhAvisalariyaru guruhariyara inthA gAvaLi janarinda nonde hariye
caraNam 2
baDavara paDidanjisi kombaru keDa nuDidoDane tappisi kombaru
hiDida baLika biDaratnyAyava inthA kaDu kEDigarinda nonde hariye
caraNam 3
munna mADida duSkarmadinda benna biDadu duSkarmada durjanara
sanga innu ninnavaroLagiTTu salaho prasanna purandara viTTalarEya
***
ಸಜ್ಜನರ ಸಂಗ ನಮಗೆಂದಿಗಾಗುವುದೊ |
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪ
ವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |
ಪೋಕರಾಡಿದ ಮಾತು ನಿಜವೆಂಬರು ||
ವಾಕ್‍ಶೂಲಗಳಿಂದ ನೆಡುವರು ಪರರ ನೀ |
ಪೋಕುಮಾನವರಿಂದ ನೊಂದೆ ಹರಿಯೆ 1
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |
ನ್ಯಾಯವಿಲ್ಲದೆ ನುಡಿವರು ಪರರ ||
ಭಾವಿಸಲರಿಯರು ಗುರುಹಿರಿಯರನಿಂಥ |
ಹೇಯ ಮನುಜರಿಂದ ನೊಂದೆ ಹರಿಯೆ 2
ಒಡಜನರನು ಕೊಂದು ಅಡಗಿಸಿಕೊಂಬರು |
ಬಿಡಲೊಲ್ಲರು ಹಿಡಿದನ್ಯಾಯವ ||
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |
ತೆತ್ತಿಗರೊಡನೆ ಪಂಥವ ನುಡಿವರು ||
ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |
ಮತ್ತಮನುಜರಿಂದ ನೊಂದೆ ಶ್ರೀಹರಿಯೆ4
ಇಷ್ಟುದಿನವು ನಿನ್ನ ನೆನೆಯದ ಕಾರಣ |
ಕಷ್ಟಪಡುವ ಕೈಮೇಲಾಗಿ ||
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
********
ಸಜ್ಜನರ ಸಂಗ ನಮಗೆಂದಿಗಾಗುವುದೊ |
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪ
ವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |
ಪೋಕರಾಡಿದ ಮಾತು ನಿಜವೆಂಬರು ||
ವಾಕ್‍ಶೂಲಗಳಿಂದ ನೆಡುವರು ಪರರ ನೀ |
ಪೋಕುಮಾನವರಿಂದ ನೊಂದೆ ಹರಿಯೆ 1
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |
ನ್ಯಾಯವಿಲ್ಲದೆ ನುಡಿವರು ಪರರ ||
ಭಾವಿಸಲರಿಯರು ಗುರುಹಿರಿಯರನಿಂಥ |
ಹೇಯ ಮನುಜರಿಂದ ನೊಂದೆ ಹರಿಯೆ 2
ಒಡಜನರನು ಕೊಂದು ಅಡಗಿಸಿಕೊಂಬರು |
ಬಿಡಲೊಲ್ಲರು ಹಿಡಿದನ್ಯಾಯವ ||
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |
ತೆತ್ತಿಗರೊಡನೆ ಪಂಥವ ನುಡಿವರು ||
ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |
ಮತ್ತಮನುಜರಿಂದ ನೊಂದೆ ಶ್ರೀಹರಿಯೆ4
ಇಷ್ಟುದಿನವು ನಿನ್ನ ನೆನೆಯದ ಕಾರಣ |
ಕಷ್ಟಪಡುವ ಕೈಮೇಲಾಗಿ ||
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
********