..
ಇಂದ್ರಮಾಣಿಕ ಬಿಗಿದ ಹೊಸ ಕುಂದಣದಾರತಿನೆತ್ತಿ
ಇಂದ್ರನ ರಾಣಿ ಶಚಿದೇವಿ
ಶಚಿದೇವಿ ಆರತಿನೆತ್ತಿ ಇಂದ್ರಾಧಿಪತಿಯ ಚರಣಕೆ 1
ಹೊನ್ನ ಹರಿವಾಣದಲಿ ಹೊಸ ಕುಂದಣದಾರತಿನೆತ್ತಿ
ಕನ್ಯೆ ಸೌಪರ್ಣಿ ಉಮಾದೇವಿ
ಉಮಾದೇವಿ ಆರತಿನೆತ್ತಿ ಬ್ರಹ್ಮಾಂಡ ಒಡೆದ ಚರಣಕೆ 2
ಇಂತು ಹಯವದನನ ಎಂತು ನಾ ಪೊಗಳುವೆ
ಸಂತೋಷದಿಂದ ಸುರರೆಲ್ಲ
ಸುರರೆಲ್ಲ ಪಾಡಿದರು ಕಾಂತೇರಿಗೆಲ್ಲಾತನುವೆಂದು(?) 3
***