Showing posts with label ಯಾರಿಗೆ ಮಾಡ್ತಿ ಮ್ಯಾ ಸಂಪದ ಯಾರಿಗೆ ಮಾಡ್ತಿ purandara vittala. Show all posts
Showing posts with label ಯಾರಿಗೆ ಮಾಡ್ತಿ ಮ್ಯಾ ಸಂಪದ ಯಾರಿಗೆ ಮಾಡ್ತಿ purandara vittala. Show all posts

Saturday, 7 December 2019

ಯಾರಿಗೆ ಮಾಡ್ತಿ ಮ್ಯಾ ಸಂಪದ ಯಾರಿಗೆ ಮಾಡ್ತಿ purandara vittala

ರಾಗ ಪೂರ್ವಿ. ಅಟ ತಾಳ

ಯಾರಿಗೆ ಮಾಡ್ತಿ ಮ್ಯಾ, ಸಂಪದ ಯಾರಿಗೆ ಮಾಡ್ತಿ ಮ್ಯಾ
ನಾರಾಯಣನೆಂಬ ನಿಜಪದವರಿಯದೆ
ಹೋರಾಡುವೆ ಹಗಲಿರುಳೆಂದೆನ್ನದೆ ||ಪ||

ನಾರಿಯು ನಿನಗಿಹಳೆ, ಹುಟ್ಟಿದ ಪೋರನು ನಿನಗಿಹನೆ
ಭಾರಿಯೊಡವೆಯುಂಟೆ ನಿನಗೀ ಊರಜನರು ನೆಂಟೆ |
ದಾರಿಯು ತಪ್ಪಿದವರಂದದಿ ನೀ
ಸೇರಬೇಡ ಭವ ಘೋರ ನರಕದೊಳು ||

ದೊರೆಗಳ ದಯ ನಿಜವೆ, ಗಂಟಿಕ್ಕಿರುವ ಧನವು ಬಲವೆ
ಬರಿಬಯಕೆಯ ಭಾಗ್ಯ ಇದೆಲ್ಲ , ಹರಿಯ ನೆನೆಯಯೋಗ್ಯ
ಒರೆಯದೆ ಮತಿಯೊಳಗರಿತಜ್ಞಾನವ ತೊರೆದಾತ್ಮ ಜ್ಞಾನದೊಳಿರದೆ ||

ಅಂಟಿಕೊಂಡು ನಿನ್ನ ಸೇರಿದ ಎಂಟು ಮದವು ಮುನ್ನ
ಕಂಠಕವಾದುದನ ಅರಿತುಕೊ ತುಂಟತನವು ಜತನ
ಸುಂಟರಗಾಳಿಯೆಂದದಿ ಹಾರಿಪ್ಪ ವೈಕುಂಠಪತಿ ನೆನೆದು ಕೃಪೆಯ ಪಡೆಯದೆ ||

ತಂದೆತಾಯ್ಗಳಾರು ನಿನಗೀ ಬಂಧುಬಳಗ ಯಾರು
ಹಿಂದಣತಮ್ಮಂದಿರ ಜತೆಗಳದಂದಣ ಬಹುದೂರ
ಒಂದರೊಳೊಂದು ವಿಚಾರಿಸಿ ನೋಡದೆ ತಂದೆ ಪುರಂದರವಿಠಲನ ಭಜಿಸದೆ ||
***

pallavi

yArige mADdimyA sampata yArige mADdimyA nArAyaNanemba nija padavariyade hOrADuve hagaliruLendennade

caraNam 1

nAriyu ninagihaLe huTTida pOranu ninagihane bhAriyoDaveyuNTe nInagI
Ura janaru neNTe dAriyu tappidavarandadi nI sErabEDa bhava ghOra narakadoLu

caraNam 2

doregaLa daya nijave gaNTekkiruva dhanavu balave bari bayakeya bhAgya idella
hariya nene ayOgya oreyade matiyoLgarita jnAnava toredAtma jnAnava doLirade

caraNam 3

aNTikoNDu ninna sErida eNTu madavu munna kaNTakavAdudana arituko
tuNTatanavu jatana suNTara kALiyendadi hArippa vaikuNThapati nenedu krpeya paDeyade

caraNam 4

tande tAigaLyAru ninagI bandu baLaga yAru hindana tammandira jategaLa dandaNa
bahu dUra ondaroLondu vicArisi nODade tande purandara viTTalana bhajisade
***