ರಾಗ: [ಮಲಯಮಾರುತ] ತಾಳ: [ಆದಿ]
ಸ್ಮರಣೆ ಒಂದೇ ಸಾಲದೆ ಈ ಗುರುಗಳ
ಸ್ಮರಣೆ ಒಂದೇ ಸಾಲದೆ ಪ
ಪರಮಪುರುಷನನ್ನು ನೆರೆನಂಬಿ ತುತಿಸುವ
ಗುರುರಾಘವೇಂದ್ರರ ಚರಣವಾರಿಜ ಯುಗ್ಮ ಅ.ಪ
ಭಜಿಪರಘವ ಕಳೆವ ದುಷ್ಟರ ಜಾಲ
ನಿಜದಿ ದೂರದಲ್ಲಿಡುವ
ಸುಜನರ ಸಂಗವ ಸೇರಿಸಿ ಕೊಡುತಿಹ
ಅಜಕರಾರ್ಚಿತ ರಾಮನ ಪಾದದ ಭಜಕರ 1
ಕಡು ಮೂರ್ಖನಾದಂಥ ವೆಂಕಣ್ಣನು
ಹುಡುಗಾಟವಾಡಿರಲು
ದೃಢ ಭಕುತಿಯಿಂದ ಸ್ಮರಣೆ ಮಾಡಿರೆ
ಕಡು ಹರುಷದಲಿ ರಾಜ ಮನ್ನಣೆ ಪಡೆದ 2
ನಿರುತ ಭಕುತಿಯಿಂದಲಿ ಸ್ಮರಿಸುತಿರೆ
ವಿರಕುತಿ ಜ್ಞಾನಗಳು
ಭರದಿ ಬಂದೊದಗಿದವು ಮನ್ನಣೆ ವಾಂಛಿತವೆ
ಗುರುಶಾಮಸುಂದರ ನಿಜದಾಸ ಭಜಕರ 3
***