..
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ.
ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ 1
ಚಂದವುಳ್ಳ ನಿರ್ಮಾಲ್ಯ ಚಾತುರ್ಯದಿ ವಿಸರ್ಜಿಸಿ ಆನಂದಸುತಗಭಿಷೇಕವಚೆಂದದಿಂದಲಿ ಮಾಡಿ ಆ ರಮ್ಯ ಬಾಲ ಉಡಿಗೆ ಶ್ರೀ-ಗಂಧ ತುಲಸಿಮಾಲೆಯರ್ಪಿಸಿಇಂದಿರೇಶಗೆ ಬೇಗ ಇಂಬಾದ ಹರಿವಾಣದಿಇಂದು ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ 2
ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ 3
ಗುರುರಾಯ ಪುರಾಣವನು ಗುಪಿತಾರ್ಥದಲಿ ಕೇಳಿಹರಿಯ ಮಂದಿರಕೆ ಪೋಗಿ ತರುವಾಯ ಘೃತಕ್ಷೀರ ತಂದು ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ 4
ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ 5
ಮಧ್ವ ಸರೋವರಜಲವು ಹೊಳೆವÀ ಚಿನ್ನ ಕಲಶÀದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತÀದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ 6
ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ7
ಕರದಲ್ಲಿ ಪಿಡಿದಿಪ್ಪಗೆ ವಡೆ ಶಿಕುನುಂಡೆ ಹಪ್ಪಳಒಡೆಯಗೋದನನೈವೇದ್ಯಒಳಿತಾದ ಅನ್ನ ಸೂಪ-ತಡೆಯದಲಂಕಾರ ಸಂಭ್ರಮದಲೊಪ್ಪುವಪರಿಮಳದ ಗಂಧ ತುಲಸಿ ಪರಮಾತ್ಮಗರ್ಪಿಸಿಉರದಿ ಧೂಪದೀಪವೆತ್ತಿತರತರದ ಪಚ್ಚಡಿಗಳು ತಳಿಲು ಸೀಕರಣೆಯುಕರಿದ ತುಪ್ಪದ ಅಪೂಪವು ಚಿತ್ರಾನ್ನ ದಧ್ಯನ್ನ ಪಂಚಕಜ್ಜಾಯಕಲಸೋಗರ ಬಿಡದೆ ಪರಮಾನ್ನಗಳನ್ನು ಸೊಗಸುಳ್ಳಕ್ಷೀರ ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ 8
ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ9
ಘನ ಸಿಂಹಾಸನಕೆ ಪೋಗಿಅಣಿಯಾದ ಫಲ ನೈವೇದ್ಯ ಆ ವ್ಯಾಸಗರ್ಪಿಸಿ ಒಂದನೆ ಮಂಗಳಾರತಿ ಎತ್ತಿಜನಕೆ ತೀರ್ಥಪ್ರಸಾದ ಜಾಗ್ರತೆಯಿಂದಲೆ ಮಾಡಿ ಭೋ-ಜನವ ಮಾಡಿಸಿ ಈರೇಳು ಜನರ ಕೀರ್ತಿಯೊಳೆಸೆವಆ ಭಾಗವತರು ತಾವು ಆ ಬೆಳ್ಳಿ ಕೋಲುಗಳನೆಬೇಗದಲಿ ಪಿಡಿದು ನಿಂತುಆರು ಹೆಡಿಗೆಯ ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ 10
ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ11
ಓಲಗದ ಮಂಟಪಕೆ ವೈಭೋಗದಲಿ ಬಂದು ಉ-ಯ್ಯಾಲೆಯಲಿ ಮುದದಿ ಕುಳಿತುಬಹಳ ಪಾನಕ ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ 12
ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ 13
ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿವಾದಿರಾಜರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ 14
***