ಹುಲಿಕುಂಟೇಪ್ರಾಣದೇವರ ಕೀರ್ತನೆ
ನಂಬಿದೆ ನಿಮ್ಮ ಪಾದ ಹುಲಿಕುಂಟೆರಾಯಾ...||ಪ||
ಬೆಂಬಿಡದೆ ಕಾಯೋ ಎಮ್ಮನು ಮಹನೀಯಾ..||ಅ.ಪ.||
ಪೊದೆಯಲಿ ಅಡಗಿದ ಪವಮಾನಾ|
ಎಮ್ಮ ಅಘವೆಂಬ
ಪೊದೆಯಾ ಕಳೆಯೋ ಸುತ್ರಾಣ...||೧||
ಎಮ್ಮ ಅಘವೆಂಬ
ಪೊದೆಯಾ ಕಳೆಯೋ ಸುತ್ರಾಣ...||೧||
ಮರುತ ನಂದನ ಹನುಮ |
ಬಲವಾಯು ಜಗತ್ರಾಣ ||
ಕುಂತಿನಂದನ ಭೀಮ
ಎಮ್ಮ ಕಾಯೋ ಗೀರ್ವಾಣ ...||೨||
ಬಲವಾಯು ಜಗತ್ರಾಣ ||
ಕುಂತಿನಂದನ ಭೀಮ
ಎಮ್ಮ ಕಾಯೋ ಗೀರ್ವಾಣ ...||೨||
ಮಾಯವಾದಿಗಳ ಗೆದ್ದು ಧೈರ್ಯದಿ ನೀನು |
ಶುದ್ಧ ಸಿದ್ಧಾಂತದ ಪದ್ದತಿಯ ತೋರಿದೆ .||
ಸಾಧನ ಮಾರ್ಗವ ತೋರುತ
ಸುಜನಕೆ ಜ್ಞಾನ ದೀವಿಗೆ ನೀನಾದೆ...||೩||
ಶುದ್ಧ ಸಿದ್ಧಾಂತದ ಪದ್ದತಿಯ ತೋರಿದೆ .||
ಸಾಧನ ಮಾರ್ಗವ ತೋರುತ
ಸುಜನಕೆ ಜ್ಞಾನ ದೀವಿಗೆ ನೀನಾದೆ...||೩||
ಬ್ರಹ್ಮಘಟ್ಟದಿ ನೆಲಿಸಿ, ಭಕುತರ ಪೋಷಿಸಿ, |
ಕಾಮಿತವೀವ ಕರುಣಿ ಎಂದೆನಿಸಿ||
ಸುಗುಣ ವಿಠಲನ ದಾಸರ
ಪೋಷಕ ನಿನಾದೆ ಜಗದಿ ||೪||
ಕಾಮಿತವೀವ ಕರುಣಿ ಎಂದೆನಿಸಿ||
ಸುಗುಣ ವಿಠಲನ ದಾಸರ
ಪೋಷಕ ನಿನಾದೆ ಜಗದಿ ||೪||
*********