ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣರ ಕಾಯಕವೇ ಮಾಡಿ | ಗುರುಧರ್ಮ ಕಾಯಕವನೆ ಮಾಡಿ ಪ
ಕಂದೋಪಮನ್ಯಾನಂದವ ಪಡೆದಾ 1
ಐದು ವರುಷದ ಮಗವಿಡಿದ ದೃಢಾ 2
ಇಳೆಯೊಳು ಕರಿರಾಜ ನೆಲೆಗೊಂದು ವಿಡಿದಾ 3
ಐವರಂಗನೆ ಭಾವದಿ ನುಡಿದಾ 4
ಭಾರವಪ್ಪಿಸಿ ಕೊಟ್ಟಾ ಕೀರಿಟಿ ಜಡಿದಾ 5
ಅಂದಿಗಿಂದಿಗೆ ಸಾಧುವೃಂದವು ನಡದಾ 6
ಮಹಿಪತಿಜ ಹೇಳಿದ ವಿಹಿತಾವಿಡಿದಾ 7
***