Showing posts with label ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು bheemesha krishna. Show all posts
Showing posts with label ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು bheemesha krishna. Show all posts

Wednesday 1 September 2021

ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು ankita bheemesha krishna

 ..

ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು

ನೀತಿಯಿಲ್ಲದ ಮಾತಲಿ ಕಾಲಕಳೆವೆ

ನಾನು ಕೋತಿ ಸಾರ್ಥಕೇನು ಪ


ಶರಧಿ ಹಾರಿ ಉರಿವಿಲಂಕೆಯನರಿವೆನೇನೊ ವಾರ್ತೆ

ತಿರುಗಿ ಮಾರ್ಗವ ಮಾಡಿ ಮಾತೆಯ ತರುವೆನೇನೊ 1


ಕಿತ್ತು ಸಂಜೀವನವ ಬೆಟ್ಟಲ್ಲಿರಿಸುವೆನೇನೊ ರಾಮ-

ರ್ಹತ್ತಿಸ್ವಾಹನನಾಗಿ ಖ್ಯಾತಿಪಡೆವೆನೇನೊ 2


ಇಂದಿರೇಶ ಕೊಡಲು ಪದವಿ ಒಲ್ಲೆಂಬೆನೇನೊ ರಾಮ-

ರೆಂಜಲೆಲೆಗ್ಹಾರೈಸಿ ಕದ್ದೊಯ್ದುಂಬೆನೇನೊ 3


ಮುನ್ನ ಹರಿಯ ಸೇವೆಗೆಂದು ಜನಿಸಿದೆನೇನೊ ಧರೆಯೊಳ್

ಧರ್ಮ ಮೀರದೆ ನಡೆದು ಖ್ಯಾತಿ ಪಡೆವೆನೇನೊ 4


ರಾಜಸೂಯಯಾಗಾಶ್ವಮೇಧ ಸಾಧಿಸುವೆನೇನೊ ರಾಜ್ಯ

ಭೇದಿಸಿ ಶತ್ರುಗಳಿಗೆ ಭಯವ ತೋರುವೆನೇನೊ 5


ಕ್ಲೇಶಮನಕಿಲ್ಲದೆ ವನವಾಸ ಸಹಿಸುವೆನೇನೊ ಅಜ್ಞಾತ-

ವಾಸೊಂದುಕ್ಷಣ ಪರಿಯಂತರ ಚರಿಸುವೆನೇನೊ 6


ಭಿಕ್ಷೆತನಕೊಂಬೊ ಸಜ್ಜನರಿಗೆ ನಮಿಸುವೆನೇನೊ ಬೋರೆ-

ವೃಕ್ಷಮೂಲದಲ್ಲಿ ಆವಾಸ ಬಯಸುವೆನೇನೊ7


ಪಾದಕ್ಕೆರಗುವೆ ಪ್ರಾಣೇಶ ನೀ ಪಾಲಿಸುವ್ಯೇನೊ ಜ್ಞಾನ

ಆದಿಮೂರುತಿ ವೇದವ್ಯಾಸನ ಒಲಿಸುವೆನೇನೊ 8


ಬಿಟ್ಟು ಚಲಿಸದೆ ನಿನ್ನಲ್ಲೆ ಮನಸಿಟ್ಟೇನೇನೊ ವಾ-

ಸಿಷ್ಠ ಭೀಮೇಶಕೃಷ್ಣನ ಭಜಿಸುತ್ತಿರುವೆನೇನೊ 9

***