..
ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು
ನೀತಿಯಿಲ್ಲದ ಮಾತಲಿ ಕಾಲಕಳೆವೆ
ನಾನು ಕೋತಿ ಸಾರ್ಥಕೇನು ಪ
ಶರಧಿ ಹಾರಿ ಉರಿವಿಲಂಕೆಯನರಿವೆನೇನೊ ವಾರ್ತೆ
ತಿರುಗಿ ಮಾರ್ಗವ ಮಾಡಿ ಮಾತೆಯ ತರುವೆನೇನೊ 1
ಕಿತ್ತು ಸಂಜೀವನವ ಬೆಟ್ಟಲ್ಲಿರಿಸುವೆನೇನೊ ರಾಮ-
ರ್ಹತ್ತಿಸ್ವಾಹನನಾಗಿ ಖ್ಯಾತಿಪಡೆವೆನೇನೊ 2
ಇಂದಿರೇಶ ಕೊಡಲು ಪದವಿ ಒಲ್ಲೆಂಬೆನೇನೊ ರಾಮ-
ರೆಂಜಲೆಲೆಗ್ಹಾರೈಸಿ ಕದ್ದೊಯ್ದುಂಬೆನೇನೊ 3
ಮುನ್ನ ಹರಿಯ ಸೇವೆಗೆಂದು ಜನಿಸಿದೆನೇನೊ ಧರೆಯೊಳ್
ಧರ್ಮ ಮೀರದೆ ನಡೆದು ಖ್ಯಾತಿ ಪಡೆವೆನೇನೊ 4
ರಾಜಸೂಯಯಾಗಾಶ್ವಮೇಧ ಸಾಧಿಸುವೆನೇನೊ ರಾಜ್ಯ
ಭೇದಿಸಿ ಶತ್ರುಗಳಿಗೆ ಭಯವ ತೋರುವೆನೇನೊ 5
ಕ್ಲೇಶಮನಕಿಲ್ಲದೆ ವನವಾಸ ಸಹಿಸುವೆನೇನೊ ಅಜ್ಞಾತ-
ವಾಸೊಂದುಕ್ಷಣ ಪರಿಯಂತರ ಚರಿಸುವೆನೇನೊ 6
ಭಿಕ್ಷೆತನಕೊಂಬೊ ಸಜ್ಜನರಿಗೆ ನಮಿಸುವೆನೇನೊ ಬೋರೆ-
ವೃಕ್ಷಮೂಲದಲ್ಲಿ ಆವಾಸ ಬಯಸುವೆನೇನೊ7
ಪಾದಕ್ಕೆರಗುವೆ ಪ್ರಾಣೇಶ ನೀ ಪಾಲಿಸುವ್ಯೇನೊ ಜ್ಞಾನ
ಆದಿಮೂರುತಿ ವೇದವ್ಯಾಸನ ಒಲಿಸುವೆನೇನೊ 8
ಬಿಟ್ಟು ಚಲಿಸದೆ ನಿನ್ನಲ್ಲೆ ಮನಸಿಟ್ಟೇನೇನೊ ವಾ-
ಸಿಷ್ಠ ಭೀಮೇಶಕೃಷ್ಣನ ಭಜಿಸುತ್ತಿರುವೆನೇನೊ 9
***
No comments:
Post a Comment