Showing posts with label ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ vijaya vittala ಗಂಗಾವತರಣ SHOBHANAVENNIRE SWARGAROHINIGE GANGAVATARANA. Show all posts
Showing posts with label ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ vijaya vittala ಗಂಗಾವತರಣ SHOBHANAVENNIRE SWARGAROHINIGE GANGAVATARANA. Show all posts

Thursday, 17 October 2019

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ ankita vijaya vittala ಗಂಗಾವತರಣ SHOBHANAVENNIRE SWARGAROHINIGE GANGAVATARANA

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಗಂಗಾವತರಣ 

 ರಾಗ ಚಂದ್ರಕೌಂಸ್ 

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ ।
ಶೋಭಾನವೆನ್ನಿ ಶುಭವೆನ್ನಿ ॥ ಪ ॥

ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು ।
ಭರದಿಂದ ಇಳಿದು ಸತ್ಯಲೋಕ ॥
ಭರದಿಂದ ಇಳಿದು ಸತ್ಯಲೋಕಕೆ ಬಂದ ।
ವಿರಜೆಗಾರುತಿಯ ಬೆಳಗಿರೇ ॥ 1 ॥

ಸರಸಿಜಾಸನನಂದು ಹರಿಪಾದ ತೊಳೆಯಲು ।
ಸರಸ ಸದ್ಗುಣದಿ ಸುರಲೋಕ ॥
ಸರಸ ಸದ್ಗುಣದಿ ಸುರಲೋಕಕೈದಿದ ।
ಸ್ವರ್ಣೆಗಾರುತಿಯ ಬೆಳಗಿರೇ ॥ 2 ॥

ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು ।
ಚಂದದಿಂದಲಿ ಮೇರುಗಿರಿಗೆ ॥
ಚಂದದಿಂದಲಿ ಮೇರುಗಿರಿಗೆ ಬಂದ ।
ಸಿಂಧುವಿಗಾರುತಿಯ ಬೆಳಗಿರೇ ॥ 3 ॥

ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು ।
ಚತುರ್ಭಾಗವಾಗಿ ಕರೆಸಿದ ॥
ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗಾ - ।
ವತಿಗಾರುತಿಯ ಬೆಳಗಿರೇ ॥ 4 ॥

ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು ।
ಚಂದ್ರ ಯಮ ದಿಕ್ಕಿಗೆ ಭದ್ರಾದೇವಿ ॥
ಚಂದ್ರ ಯಮ ದಿಕ್ಕಿಗೆ ಭದ್ರಾದೇವಿ ಅಳಕ - ।
ನಂದನಿಗಾರುತಿಯ ಬೆಳಗಿರೇ ॥ 5 ॥

ಕುಂದ ಮಂದರೆ ಇಳಿದು ಗಂಧಮಾದನಗಿರಿಗೆ ।
ಹಿಂಗದೆ ಪುಟಿದು ವಾರಿನಿಧಿಯ ॥
ಹಿಂಗದೆ ಪುಟಿದು ವಾರಿನಿಧಿಯ ನೆರದ ।
ಗಂಗೆಗಾರುತಿಯ ಬೆಳಗಿರೇ ॥ 6 ॥

ಗಿರಿಜ ಸುಪಾರ್ಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು ।
ಪರಿದಂಬುಧಿಯ ಕೂಡಿ ಮೆರದೆ ॥
ಪರಿದಂಬುಧಿಯ ಕೂಡಿ ಮೆರದಾ ।
ತ್ರಿದಶೇಶ್ವರಿಗಾರುತಿ ಬೆಳಗಿರೇ ॥ 7 ॥

ಕುಮುದಾದ್ರಿಗೆ ಇಳಿದು ನಳ ಶತಶೃಂಗ ।
ಕ್ಷಮಧಾರಿಗಳಿಗೆ ಹಾರಿ ವನಧಿ ॥
ಕ್ಷಮಧಾರಿಗಳಿಗೆ ಹಾರಿ ವನಧಿ ಕೂಡಿದಾ ।
ಸುಮತಿಗಾರುತಿಯ ಬೆಳಗಿರೇ ॥ 8 ॥

ಮೇರು ಮಂದರಕಿಳಿದು ನಿಷಿಧ ಕಾಂಚನಕೂಟ ।
ಮೀರಿ ಹಿಮಗಿರಿಗೆ ಹಾರಿ ಬದರಿಗೆ ॥
ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ ।
ನಾರಿಗಾರುತಿಯ ಬೆಳಗಿರೇ ॥ 9 ॥

ಕ್ಷಿತಿಪ ಭಗೀರಥನಂದು ತಪವ ಮಾಡಲು ನಲಿದು ।
ಅತಿಶಯವಾಗಿ ಧರೆಗಿಳಿದು ॥
ಅತಿಶಯವಾಗಿ ಧರೆಗಳಿದು ಬಂದಾ ಭಾಗೀ - ।
ರಥಿಗಾರುತಿಯ ಬೆಳಗಿರೇ ॥ 10 ॥

ಮುನಿಜನ್ಹು ಮುದದಿಂದ ಆಪೋಶನವ ಮಾಡೆ ।
ಜನನಿ ಜಾನ್ಹವಿ ಎನಿಸಿದ ॥
ಜನನಿ ಜಾನ್ಹವಿ ಎನಿಸಿದಾ ಮೂಜಗದ ।
ಜನನಿಗಾರುತಿಯ ಬೆಳಗಿರೇ ॥ 11 ॥

ವಿಷ್ಣು ಪ್ರಜಾಪತಿ ಕ್ಷೇತ್ರದಲ್ಲಿ ನಿಂದು ।
ಇಷ್ಟಾರ್ಥ ನಮಗೆ ಕೊಡುವಳು ॥
ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ - ।
ತುಷ್ಟಿಗಾರುತಿಯ ಬೆಳಗಿರೇ ॥ 12 ॥

ಕ್ರಮದಿಂದ ಬಂದು ನಲಿವುತ ಸರಸ್ವತಿ ।
ಯಮುನೇರ ನೆರೆದು ತ್ರಿವೇಣಿ ॥
ಯಮುನೇರ ನೆರೆದು ತ್ರಿವೇಣಿ ಎನಿಸಿದ ।
ವಿಮಲೆಗಾರುತಿಯ ಬೆಳಗಿರೇ ॥ 13 ॥

ಸತ್ವರಜೋತಮ ತ್ರಿವಿಧ ಜೀವರು ಬರಲು ।
ಅತ್ಯಂತವಾಗಿ ಅವರವರ ॥
ಅತ್ಯಂತವಾಗಿ ಅವರವರ ಗತಿ ಕೊಡುವ ।
ಮಿತ್ರೆರಿಗಾರುತಿಯ ಬೆಳಗಿರೇ ॥ 14 ॥

ಪತಿಯ ಸಂಗತಿಯಿಂದ ನಡೆತಂದು ಭಕುತಿಯಲಿ ।
ಸತಿಯಲ್ಲಿ ವೇಣಿ ಕೊಡಲಾಗಿ ॥
ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ - ।
ಪತಿವ್ರತೆಗಾರುತಿಯ ಬೆಳಗಿರೇ ॥ 15 ॥

ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು ।
ಏನೆಂಬೆನಯ್ಯ ಪಡಿಗಾಣೆ ॥
ಏನೆಂಬೆನಯ್ಯಾ ಪಡಿಗಾಣೆ ಸುಖವೀವ ಕ - ।
ಲ್ಯಾಣಿಗಾರುತಿಯ ಬೆಳಗಿರೇ ॥ 16 ॥

ಒಂದು ಜನ್ಮದಲಿ ವೇಣಿಯಿತ್ತವಳಿಗೆ ।
ಎಂದೆಂದು ಬಿಡದೆ ಐದೆತನವ ॥
ಎಂದೆಂದು ಬಿಡದೆ ಐದೆತನವೀವ ಸುಖ - ।
ಸಾಂದ್ರೆಗಾರುತಿಯ ಬೆಳಗಿರೇ ॥ 17 ॥

ವಾಚಾಮಗೋಚರ ವರುಣನರ್ಧಾಂಗಿನಿ 
ಪ್ರಾಚೀನ ಕರ್ಮಾವಳಿಹಾರಿ ॥
ಪ್ರಾಚೀನ ಕರ್ಮಾವಳಿಹಾರಿ ಮಕರ - ।
ವಾಚಾಳಿಗಾರುತಿಯ ಬೆಳಗಿರೇ ॥ 18 ॥

ಅಂತರ ಬಾಹಿರ ಪಾಪ ಅನೇಕವಾಗಿರೆ 
ಸಂತೋಷದಿಂದ ಭಜಿಸಲು ॥
ಸಂತೋಷದಿಂದಲಿ ಭಜಿಸಲು ಪೊರೆವ ಮಹ - ।
ಕಾಂತೆಗಾರುತಿಯ ಬೆಳಗಿರೇ ॥ 19 ॥

ಗುರುಭಕುತಿ ತರತಮ್ಯ ಇಹಪರದಲ್ಲಿ ತಿಳಿದು ।
ಹರಿಪರನೆಂದು ಪೊಗಳುವ ॥
ಹರಿಪರನೆಂದು ಪೊಗಳುವರ ಪೊರೆವ ।
ಕರುಣಿಗಾರುತಿಯ ಬೆಳಗಿರೇ ॥ 20 ॥

ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂತು ।
ಬಗೆಬಗೆ ಶುಭವ ಕೊಡುವಳು ॥
ಬಗೆಬಗೆ ಶುಭವ ಕೊಡುವ ವಿಜಯವಿಠ್ಠಲನ ।
ಮಗಳಿಗಾರುತಿಯ ಬೆಳಗಿರೇ ಶೋಭಾನೆ ॥ 21 ॥
********

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |
ಶೋಭಾನವೆನ್ನಿ ಶುಭವೆನ್ನಿ ಪ

ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |
ಭರದಿಂದ ಇಳಿದು ಸತ್ಯಲೋಕ ||
ಭರದಿಂದ ಇಳಿದು ಸತ್ಯಲೋಕಕೆ ಬಂದ |
ವಿರಜೆಗಾರುತಿಯ ಬೆಳಗಿರೇ 1

ಸರಸಿಜಾಸನ ನಮ್ಮ ಹರಿಪಾದ ತೊಳಿಯಲು |
ಸರಸ ಸದ್ಗುಣ ಸುರಲೋಕ |
ಸರಸ ಸದ್ಗುಣದಿ ಸುರಲೋಕಕೈದಿದಾ |
ಸ್ವರ್ಣೆಗಾರುತಿಯ ಬೆಳಗಿರೇ 2

ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು |
ಚಂದದಿಂದಲಿ ಮೇರುಗಿರಿಗೆ |
ಚಂದದಿಂದಲಿ ಮೇರುಗಿರಿಗೆ ಬಂದಾ |
ಸಿಂಧುವಿಗಾರುತಿಯ ಬೆಳಗಿರೇ 3

ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು |
ಚತುರ್ಭಾಗವಾಗಿ ಕರೆಸಿದ |
ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ |
ವತಿಗಾರುತಿಯ ಬೆಳಗಿರೇ4

ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ |
ನಂದಿನಿಗಾರುತಿಯ ಬೆಳಗಿರೇ 5

ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ |
ಹಿಂಗದೆ ಪುಟಿದು ವಾರಿನಿಧಿಯ |
ಹಿಂಗದೆ ಪುಟಿದು ವಾರಿನಿಧಿಯ ನೆರದ |
ಗಂಗೆಗಾರುತಿಯ ಬೆಳಗಿರೇ 6

ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು |
ಪರಿದಂಬುಧಿಯ ಕೂಡಿ ಮೆರದು |
ಪರಿದಂಬುಧಿಯ ಕೂಡಿ ಮೆರದಾ |
ತ್ರಿದಶೇಶ್ವರಿಗಾರುತಿ ಬೆಳಗಿರೇ7

ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ |
ವನಧಿ |
ವನಧಿ ಕೂಡಿದಾ |
ಸುಮತಿಗಾರುತಿಯ ಬೆಳಗಿರೇ 8

ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ |
ನಾರಿಗಾರುತಿಯ ಬೆಳಗಿರೇ 9

ಕ್ಷಿತಿಪ ಭಗೀರಥನಂದು ತಪವ ಒಲಿದು|
ಅತಿಶಯವಾಗಿ ಧರೆಗಿಳಿದು |
ಅತಿಶಯವಾಗಿ ಧರೆಗಳಿದು ಬಂದಾ |
ಭಾಗೀರಥಿಗಾರುತಿಯ ಬೆಳಗಿರೇ10

ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ |
ಜನನಿ ಜಾನ್ಹವಿ ಎನಿಸಿದಾ|
ಜನನಿ ಜಾನ್ಹವಿ ಎನಿಸಿದಾ ಮೂಜಗದ |
ಜನನಿಗಾರುತಿಯ ಬೆಳಗಿರೇ 11

ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು |
ಇಷ್ಟಾರ್ಥ ನಮಗೆ ಕೊಡುವಳು ಸತತ |
ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ |
ತುಷ್ಟಿಗಾರುತಿಯ ಬೆಳಗಿರೇ 12

ಕ್ರಮದಿಂದ ಬಂದು ನಲಿವುತ ಸರಸ್ವತಿ |
ಯಮುನೇರ ನೆರೆದು ತ್ರಿವೇಣಿ |
ಯಮುನೇರ ನೆರೆದು ತ್ರಿವೇಣಿ ಎನಿಸಿದಾ |
ವಿಮಲೆಗಾರುತಿ ಬೆಳಗಿರೇ13

ತ್ರಿವಿಧ ಜೀವರು ಬರಲು |
ಅತ್ಯಂತವಾಗಿ ಅವರವರ |
ಅತ್ಯಂತವಾಗಿ ಅವರವರ ಗತಿ ಕೊಡುವ |
ಮಿತ್ರೆಗಾರುತಿ ಬೆಳಗಿರೇ 14

ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ |
ಸತಿಯಲ್ಲಿ ವೇಣಿಕೊಡಲಾಗಿ |
ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ |
ಪ್ರತಿಗಾರುತಿ ಬೆಳಗಿರೇ 15

ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು |
ಪಡಿಗಾಣೆ |
ಪಡಿಗಾಣೆ ಸುಖವೀವ |
ಕಲ್ಯಾಣಿಗಾರುತಿಯ ಬೆಳಗಿರೇ 16

ಒಂದು ಜನ್ಮದಲಿ ವೇಣಿಯಿತ್ತವಳಿಗೆ |
ಎಂದೆಂದು ಬಿಡದೆ ಐದೆತನವ |
ಎಂದೆಂದು ಬಿಡದೆ ಐದೆತನವೀವ ಸುಖ |
ಸಾಂದ್ರೆಗಾರುತಿಯ ಬೆಳಗಿರೇ 17

ವಾಚಾಮಗೋಚರೆ ವರುಣನರ್ಧಾಂಗಿನಿ |
ಪ್ರಾಚೀನ ಕರ್ಮಾವಳಿ ಹಾರಿ |
ಮಕರ |
ವಾಚಳಿಗಾರುತಿಯ ಬೆಳಗಿರೇ 18

ಅಂತರ ಬಾಹಿರ ಪಾಪ ಅನೇಕವಾಗಿರೆ |
ಸಂತೋಷದಿಂದಲಿ ಭಜಿಸಲು |
ಸಂತೋಷದಿಂದಲಿ ಭಜಿಸಲು ಪೊರೆವ ಮಹಾ |
ಕಾಂತೆಗಾರುತಿಯ ಬೆಳಗಿರೇ 19

ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು |
ಹರಿ ಪರನೆಂದು ಪೊಗಳುವರ |
ಹರಿ ಪರನೆಂದು ಪೊಗಳುವರ ಪೊರೆವ |
ಕರುಣಿಗಾರುತಿಯ ಬೆಳಗಿರೇ20

ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು |
ಬಗೆ ಬಗೆ ಶುಭವ ಕೊಡುವಳು |
ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ |
ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
********