ಕೋತಿ ಹಾಗೆ ಕುಣಿದಾಡಬೇಡ
ರೀತಿಮಾರ್ಗವ ಹಿಡಿಯೆಲೊ ಮೂಢ ||ಪ||
ಆತುರ ಹಚ್ಚಿ ಕೂಗಾಡಬೇಡ
ಪಾತಕ್ಕೆ ಈ ಜನ್ಮ ಬಿದದಿರೊ ಮೂಢ ||ಅ||
ಹಳ್ಳೂರು ಕೇರ್ಯಾಗೆ ಇರುವುದು ಹಂದಿ
ನಾನಾ ಜನ್ಮವ ತಿರುಗುತ ಬಂದೆ
ಇಷ್ಟು ಸಂಸಾರವ ಮರೆಮಾಡಿಕೊಂಡೆ
ಮುಪ್ಪಿನ ಕಾಲಕ್ಕೆ ಅವಿಚಾರಗೊಂಡೆ ||
ಹೆಂಡರು ಮಕ್ಕಳು ಪ್ರಪಂಚಕ್ಕಾಗಿ
ದುಡಿದುಹಾಕಿದ್ಯೋ ಮುದಿಕೋಣನಾಗಿ
ಮಡಿದುಹೋಗುವಾಗ ದಾರಿಲ್ಲೊ ಗೂಗೆ
ನಿನ್ನೊಳು ನೀನೆ ತಿಳಿದುಕೋ ಕಾಗೆ ||
ರಾಯರು ಇರುವರು ಮದಗಜದಂತೆ
ಬಾಗಿ ನಡೀತೀರೋ ಬಿಡಿಸೂಳೆಯಂತೆ
ಇಷ್ಟು ಸಂಸಾರ ಸ್ಥಿರವಲ್ಲದಂತೆ
ಪುರಂದರವಿಠಲರಾಯ ಪದಮಾಡಿದಂತೆ ||
***
ರಾಗ ನಾದನಾಮಕ್ರಿಯೆ ಅಟತಾಳ (raga, taala may differ in audio)
pallavi
kOti hAge kuNidADa bEDa rIti mArgava hiDiyalo mUDha
anupallavi
Atura hecci kUgADa bEDa pAdakke janma biDadirO mUDha
caraNam 1
haLLUru kEryAge iruvudu handi nAnA janmava tiruguta bandi
iSTu samsArava mare mADi koNDi muppina kAlakke avicAra goNdi
caraNam 2
heNDiru makkaLa prapancakkAgi duDidu hAgidyo mudikONanAgi
maDidu hOguvAga dArillo gUge ninnoLu nIne tiLiduko kAge
caraNam 3
rAyaru iruvaru madagajadante bAgi naDitiro biDi suLeyante
iSTu smsAra sthiravilladante purandara viTTalarAya pada mADidante
***