..
kruti by Nidaguruki Jeevubai
ಪರಮಾನಂದದಿ ಸರಸಿಜಾಕ್ಷಿಯರೆಲ್ಲ
ಪರಮ ಪುರುಷನಿಗಾರತಿ ಎತ್ತುತ ಪ
ಕರಿವರ ವರದನ ಸ್ಮರಿಸುತ ಸಂತತ
ನವರತ್ನದಾರತಿ ಬೆಳಗಿದರು ಅ.ಪ
ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ
ಗೋವರ್ಧನೋದ್ಧಾರ ಗೋವಿಂದಗೆ
ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ
ಗೋಪಿಬಾಲನಿಗೆ ಎತ್ತಿದರಾರತಿ1
ನಂದಕುಮಾರಗೆ ನವನೀತ ಚೋರಗೆ
ಬೃಂದಾವನÀದಿ ವಿರಾಜಿಪಗೆ
ಚಂದಿರವದನಗೆ ಇಂದಿರೆ ಸಹಿತಗೆ
ಕುಂದಣದಾರತಿ ಬೆಳಗಿದರು2
ಕಮಲದಳಾಕ್ಷಗೆ ಕಮಲಮುಖಿಯರೆಲ್ಲ
ಕಮಲ ಮುತ್ತಿನ ಆರತಿ ಪಿಡಿದು
ಕಮಲನಾಭ ವಿಠ್ಠಲನ ಪಾಡಿ ಹರುಷದಿ
ಕಮಲಾಕ್ಷಿಯರು ಶೋಭನ ಪಾಡುತ್ತ 3
***