Showing posts with label ಹರಿಹರಿಯೆ ಕಡೆಗಾಣೆನೈ ಜನುಮವಭವ prasannavenkata. Show all posts
Showing posts with label ಹರಿಹರಿಯೆ ಕಡೆಗಾಣೆನೈ ಜನುಮವಭವ prasannavenkata. Show all posts

Tuesday, 19 November 2019

ಹರಿಹರಿಯೆ ಕಡೆಗಾಣೆನೈ ಜನುಮವಭವ ankita prasannavenkata

by ಪ್ರಸನ್ನವೆಂಕಟದಾಸರು
ಹರಿಹರಿಯೆ ಕಡೆಗಾಣೆನೈ ಜನುಮವಭವಕಡಲ ತಡಿಯ ಸೇರಿಸುಮಾಧವ ಪ.

ವಿಷಯಾಸೆ ತೆರೆಗಳಲ್ಲಿ ಗೃಹವೆ ಗ್ರಹವಿಷಮ ಸತಿಸುತ ಗುಲ್ಮವು ವಡವಾಗ್ನಿಹಸಿವುತೃಷೆದಹಿಸಿತೆನ್ನ ಇದರೊಳಾಲಸಿಕೆಸುಳಿಭ್ರಮಣ ಘನ್ನ1

ಷಟ್ಚರ್ಯ ಹಡಗದವರು ಬಿಡದೆ ಬೆನ್ನಟ್ಟಿ ಬಡಿದಂಜಿಸುವರು ಮನವಾಯುವಿನಟ್ಟುಳಿಗೆ ನಿಲವಿಲ್ಲವು ಇಂದ್ರಿಯಜಂತುಕಟ್ಟಿಲ್ಲದೆಳೆದೊಯ್ವವು 2

ಸಂಸಾರಸಾರಫೇನ ಭುಂಜಿಸಲುಸಂಶಯದ ರೋಗ ನವೀನ ದುರಿತಾಂಬುಹಿಂಸೆ ಮಾಡದೆ ಉಳುಹಿತು ಅಜÕವ್ಯಾಳದಂಶ ಕ್ಷಣಲವಕಾಯಿತು 3

ಸುಖವೆ ಬೊಬ್ಬುಳಿ ರಾಶಿಯು ಬಂಧು ಬಳಗಸಖಸ್ನೇಹ ಪಾಶಲತೆಯು ಅಹಿತಾಗಮ ಕಠೋರ ದುಶ್ಯಬ್ದಕೆಸ್ಮøತಿಹೋಗಿಚಕಿತನಹೆ ದೀನಬಂಧು 4

ಇಂತು ಬಳಲುವುದ ನೋಡಿ ಸಿರಿಲಕುಮಿಕಾಂತ ನಿರ್ದಯನಾದೆ ನೀ ಪ್ರಸನ್ನವೆಂಕಟಕಾಂತ ಸಂತರ ಕೂಡಿಸೊ ಶ್ರೀ ಮೂರುತಿಅಂತ್ಯಯಾತ್ರೆಗೆ ಉದಯಿಸೊ 5
********