Showing posts with label ಕೊಡುವುದೆಂದು ಎನ್ನ ಕೊಂಬುದೆಂದು purandara vittala. Show all posts
Showing posts with label ಕೊಡುವುದೆಂದು ಎನ್ನ ಕೊಂಬುದೆಂದು purandara vittala. Show all posts

Wednesday, 4 December 2019

ಕೊಡುವುದೆಂದು ಎನ್ನ ಕೊಂಬುದೆಂದು purandara vittala

ಪುರಂದರದಾಸರು
ರಾಗ ಪೂರ್ವಿ ಅಟತಾಳ

ಕೊಡುವುದೆಂದು ಎನ್ನ ಕೊಂಬುವುದೆಂದು ಕೈ-
ಪಿಡಿವುದೆಂದು ನೀನೊಲಿವುದೆಂದು ||
ಕೊಡುಕೊಂಬೊ ಮಹದನುಗ್ರಹದವನೆಂದು ನಿ-
ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ....||ಪ ||

ಶ್ವಾನ ಸೂಕರ ಜನ್ಮ ನಾನುಂಬೆನೆನ್ನಲ್ಲಿ
ನೀನೆ ತದ್ರೂಪನಾದೆಯಲ್ಲ
ಹೀನರೊಳ್ನಾನತಿಹೀನನಾಗಿ ಅಭಿ-
ಮಾನಿಯಾಗಿ ಕಾಲ ಕಳೆದೆನಲ್ಲ
ವಾನರನಂಗಯ್ಯ ಮಾಣಿಕ್ಯದಂತೆನ್ನ
ಮಾನದಂತರ್ಯಾಮಿ ಸಿಕ್ಕಿದೆಯಲ್ಲ
ಏನಾದರು ನಿನ್ನೊಳು ಎನಗೆ ಮುಂದೆ
ಜ್ಞಾನಭಕ್ತಿವೈರಾಗ್ಯ ಭಾಗ್ಯವನ್ನು ||

ಕಾಡಿನ ಮೃಗವು ಹಾಡಿದರೆ ನಂಬಿ
ಆಡುವುದಲ್ಲದೆ ಓಡುವುದೆ
ಗಾಡಿಪ್ಪ ಪಶುವಿನ ಬಾಲವ ಕಟ್ಟಿಸಿ
ಕೂಡೆ ಪಾಲ್ಗರೆಯಲು ದಬ್ಬುವುದೆ
ಆಡುವ ಶಿಶು ತಪ್ಪು ಮಾಡಲು ಜನನಿ ಕೊಂ-
ಡಾಡುವಳಲ್ಲದೆ ದೂಡುವಳೆ
ಮೂಢಬುದ್ಧಿಯೊಳ್ ಕೆಟ್ಟೆನೆಂದು ಕೋಪ
ಮಾಡಬೇಡ ದಯಮಾಡಿ ನೀಡಿಷ್ಟವ ||

ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ
ನಿನ್ನ ಸೇರುವ ಯತ್ನಬಿಟ್ಟು ನಾನು
ಹೆಣ್ಣು ಹೊನ್ನು ಮಣ್ಣಿಗಾಗಿ ನಾ ಭ್ರಮೆಗೊಂಡು
ಸುಣ್ಣಕಿಕ್ಕಿದ ನೀರಿನಂತಾದೆನೊ
ಎನ್ನಪರಾಧ ಅನಂತ ಕ್ಷಮಿಸು ನೀ
ಮನ್ನಿಸದಿರ್ದರಾರಿಗೆ ಪೇಳ್ವೆನೊ
ಓ ನಮೋ ಶ್ರೀಹರಿಯೆಂಬ ಪೂರ್ಣಜ್ಞಾನ-
ವನ್ನು ಪುರಂದರವಿಠಲ ಎನ್ನಪ್ಪನೆ ||
***

pallavi

koDuvudendu enna kombuvadendu kai piDivudendu nInolivudendu koNDu kombo mahadananugrahadavanendu ninnaDige sEridenayya baDatanagauSada koDuvudendu

caraNam 1

svAna sukara janma nAnumbenennalli nIne tatrUpanAdeyalla hInaroL nAnadi hInanAgi
abhimAniyAgi kAla kaLedenalla vAnaranangayya mANikyadantenna mAnadantaryAmi
sikkideyalla EnAdaru ninnoLu enage munde jnAna bhakti vairAgyavannu

caraNam 2

kADina mrgavu hADidare nambi Aduvudallade Oduvude kADippa pashuvina bAlava
kaTTisi kUDe pAl gareyalu dabbuvude Aduva shishu tappu mADalu janisi koNDADuvaLallade
dUDuvaLe mUDha buddhiyoLu keTTenendu kOpa mADabEDa daya mADi nIDiSTava

caraNam 3

haNNAda hottu bAi huNNAda teranante ninna sEruva yatna biTTu nAnu heNNu honnu maNNIgAgi
nA bhrame koNDu suNNa kikkida nIrinantAdeno ennaparAda ananta kSamisu nI mannisadirdarArige
pELveno Om namO shrI hariyemba pUrNa jnAnavannu purandara viTTala ennappane
***

ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|
ಪಿಡಿವುದೆಂದು ನೀ ಒಲಿವುದೆಂದು ಪ

ಕೊಡುಕೊಂಬ ಮಹದನುಗ್ರಹದವನೆಂದು ನಿ-|
ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪ

ಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |ನೀನೇ ತತ್ತದ್ರೂಪನಾದೆಯಲ್ಲ ||ಹೀನರೊಳ್ ನಾನತಿ ಹೀನನಾಗಿ-ಅಭಿ-|ಮಾನಿಯಾಗಿ ಕಾಲಕಳೆದೆನಲ್ಲ ||ವಾನರನಂಗೈಯ ಮಾಣಿಕ್ಯದಂತೆನ್ನ |ಮಾನದಂತರ್ಯಾಮಿ ಸಿಕ್ಕೆಯಲ್ಲ ||ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|ಙ್ಞÕನ-ವೈರಾಗ್ಯ ಭಾಗ್ಯಗಳನು ದೇವ 1

ಕಾಡಿನ ಮೃಗವು ತಾ ಹಾಡಿದರೆ ನಂಬಿ |ಆಡುವುದಲ್ಲದೆ ಓಡುವುದೆ? ||ಕಾಡುವ ಪಶುವಿನ ಬಾಲವ ಕಟ್ಟಿಸಿ |ಕೂಡೆ ಪಾಲ್ಗರೆಯಲು ಒದೆಯುವುದೆ? ||ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|ಡಾಡುವಳಲ್ಲದೆ ದೂಡುವಳೆ ||ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |ಮಾಡಬೇಡ ದಯೆಮಾಡಿ ನೀಡಿಷ್ಟವ 2

ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |ನಿನ್ನ ಸೇರುವ ಯತ್ನ ಬಿಟ್ಟು ನಾನು ||ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |ಸುಣ್ಣಕಿಕ್ಕಿದ ನೀರಿನಂತಾದೆನು ||ಎನ್ನಪರಾಧವನಂತ ಕ್ಷಮಿಸು ನೀನು |ಮನ್ನಿಸದಿರಲಾರಿಗೆ ಪೇಳ್ವೆನು ||ಓಂ ನಮೋ ಶ್ರೀಹರಿಎಂಬ ಪೂರ್ಣಙ್ಞÕನ-|ವನ್ನು ಪುರಂದರವಿಠಲನ ಎನ್ನಪ್ಪನೆ 3
*******