Showing posts with label ಪ್ರಾಣನ್ನ ನೋಡಿರೇ ಗುರು ಮುಖ್ಯ ಪ್ರಾಣನ್ನ ನೋಡಿರೇ gurumahipati PRAANANNA NODIRE GURU MUKHYA PRAANANNA NODIRE. Show all posts
Showing posts with label ಪ್ರಾಣನ್ನ ನೋಡಿರೇ ಗುರು ಮುಖ್ಯ ಪ್ರಾಣನ್ನ ನೋಡಿರೇ gurumahipati PRAANANNA NODIRE GURU MUKHYA PRAANANNA NODIRE. Show all posts

Thursday, 2 December 2021

ಪ್ರಾಣನ್ನ ನೋಡಿರೇ ಗುರು ಮುಖ್ಯ ಪ್ರಾಣನ್ನ ನೋಡಿರೇ ankita gurumahipati PRAANANNA NODIRE GURU MUKHYA PRAANANNA NODIRE



 ಕಾಖಂಡಕಿ ಶ್ರೀ ಕೃಷ್ಣದಾಸರು


ಪ್ರಾಣನ್ನ ನೋಡಿರೇ ಗುರು ಮುಖ್ಯ ಪ್ರಾಣನ್ನ ನೋಡಿರೇ ಪ 

(ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ) 


ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. 


ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 


ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 


ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 


ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 


ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 


ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6

***