ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು
ಕಪ್ಪು ಎನ್ನಲು ಬೇಡವೋ ||ಪ||
ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು
ಪಾರಿಜಾತವೆ ಕಪ್ಪು , ಕರಿಗಳೆಲ್ಲವು ಕಪ್ಪು , ಸುಲಲಿತವರನೆ ಕಪ್ಪು
ಸನ್ನುತವಾದ ಹರಿಹಯ ನೀಲಿಕಪ್ಪು , ಅಂಗನೆ ಕೇಳು
ಜಗದೊಳಗೆ ಗುಲಗಂಜಿ ಶಿರಗಳೆಲ್ಲವು ಕಪ್ಪು ||
ಬರೆವ ಕಂಟವೆ ಕಪ್ಪು , ಭಾರದ್ವಾಜವೆ ಕಪ್ಪು , ವರರಾಘವನ್ನ
ಪಾವನಾಂಗವೆ ಕಪ್ಪು , ಎರೆವ ಭೂಮಿಯು ಕಪ್ಪು , ಎಸೆವ ಕಸ್ತೂರಿ ಕಪ್ಪು
ಸುಲಲಿತವರನೆ ಕಪ್ಪು , ಅಂಗನೆ ಕೇಳು
ಮೂರುಲೋಕದಿ ನಮ್ಮ ಮುದ್ದುಕೃಷ್ಣನೆ ಕಪ್ಪು ||
ಶಾಲಿಗ್ರಾಮವೆ ಕಪ್ಪು , ಸರಸಿಜೋದ್ಭವ ಕಪ್ಪು , ಲೋಲಂಬಗಳು ಕಪ್ಪು
ರುಚಿತ ಕೋಗಿಲೆ ಕಪ್ಪು , ಮಾಲವುತ್ವವೆ ಕಪ್ಪು , ನಿರ್ಮಲಚಿತ್ತವೆ ಕಪ್ಪು
ಕಾಲಿಂದೀ ನದಿಯೆ ಕಪ್ಪು , ಕಾಮಿನಿಯರ ಕರಿಮಣಿಸರವೆ ಕಪ್ಪು , ಅಂಗನೆ ಕೇಳು
ಮೂರುಲೋಕದಿ ನಮ್ಮ ಪುರಂದರವಿಠಲ ಮೂರುತಿ ಕಪ್ಪು ||
***
pallavi
kappuyennalu bEDavO shrI hariyannu kappuyennalu bEDavO
caraNam 1
hariya madhyadi kappu hAlA halavu kappu parama ashvave kappu
pArijAtave kappu karigaLellavu kappu su-lalitavarane kappu sannutavAda
harihaya nIli kappu angane kELu jagadoLu gulugunji shiragaLellavu kappu
caraNam 2
bareva kaNTave kappu bhAradvAjave kappu vara rAghavanna
pAvanAngave kappu ereva bhUmiyu kappu eseva kastUri kappu su-lalitavarane
kappu angane kELu mUru lOkadi namma muddu krSNane kappu
caraNam 3
shAligrAmave kappu sarasijOdbhava kappu lOlambugaLu kappu rucita kOkile
kappu mAlavutvave kappu nirmala cittave kappu kALidI nadiye kappu kAminiyara
karimaNisarave kappu angane kELu mUru lOkadi namma purandara viTTala mUruti kappu
***
ರಾಗ ಶಂಕರಾಭರಣ ಅಟತಾಳ