Showing posts with label ರಾಘವೇಂದ್ರ ತೀರ್ಥನೀತ ರಾಜಿಸುವಾತ ಪಾಪ madhwesha vittala RAGHAVENDRA TEERTHANEETA RAAJISUVAATA PAAPA. Show all posts
Showing posts with label ರಾಘವೇಂದ್ರ ತೀರ್ಥನೀತ ರಾಜಿಸುವಾತ ಪಾಪ madhwesha vittala RAGHAVENDRA TEERTHANEETA RAAJISUVAATA PAAPA. Show all posts

Sunday, 5 December 2021

ರಾಘವೇಂದ್ರ ತೀರ್ಥನೀತ ರಾಜಿಸುವಾತ ಪಾಪ ankita madhwesha vittala RAGHAVENDRA TEERTHANEETA RAAJISUVAATA PAAPA



ರಾಘವೇಂದ್ರ ತೀರ್ಥನೀತ ರಾಜಿಸುವಾತ                  || ಪ ||
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ            || ಅ ||

ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ                 || ೧ ||

ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ – ಪ್ರೌಢ
ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ            || ೨ ||

ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ – ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ – ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ                || ೩ ||
****