..
ಮಂಗಳಗಾನ ವಿಲೋಲಾ | ಮುನಿಪಾಲಾ ಫಣಿಮಾಲಾ
ಮುನಿಪಾಲಾ ಫಣಿಮಾಲಾನಂತ ಶೀಲಾನಂತ ಶೀಲಾ ಪ
ಬಲಿಮದ ಭಂಜನಾ | ಕುಲಿಶ ಧರಾರ್ಚಿತ
ಯಲರುಣಿ ತಲ್ಪಸುಶಯನ | ಸುಶಯನಾ
ಶಶಿವದನಾ ವಿಪಗಮನಾ 1
ಘುನಗುಣನಿಧಿ ವನಜಾಸನ ಜನಕಾ
ದಿವಕೋಟ ಪ್ರಕಾಶ ಅಘುನಾಶ
ಜಗದೀಶಾ ಜಗದೀಶಾ ಶ್ರೀನಿವಾಸಾ 2
ಸಾಮಜ ಭಯಹರ ರಾಮ ಶ್ರೀರಾಮಾ
ಶಾಮಸುಂದರ ರಘುವೀರಾ ಭವದೂರ
ಮುರಹರಾ ಮುರಹರಾ ಸುಕುಮಾರ 3
***