Showing posts with label ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ vijaya vittala. Show all posts
Showing posts with label ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ vijaya vittala. Show all posts

Thursday 17 October 2019

ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ankita vijaya vittala

ವಿಜಯದಾಸ
ಮಗನೆಂದೆಂಬುವ ಇನ್ನು ಮತ್ತಾವನೊ
ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ಪ

ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_
ಭುಕ್ತನಾಗಿದ್ದ ಸಂಸಾರದೊಳಗಾ
ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು
ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ1

ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ
ವಿಕೃತಿಯ ಮಾಡುವ ಮದದಿಂದಲೀ
ಸುಕೃತವನು ಮರೆದು ದೂರಾಗಿ ಸಂಚರಿಸುವ-
ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ 2

ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ-
ನ್ಮತ್ತನಾಗಿ ಕೆಟ್ಟ ಗ್ರಾಸವನ್ನು
ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ
ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು 3

ನಾಡೊಳಗೆ ನೀನೆ ಮಗನೆಂದವನ ಭಾಗ್ಯಕ್ಕೆ
ಈಡುಗಾಣೆನು ಎಲ್ಲಿ ವಿಚಾರಿಸೆ
ಕಾಡಿ ಬೇಡುವೆ ಮುನ್ನೆ ಪರಿಪರಿಬಾಧೆಬಡಿಸಿ
ಕೂಡಿರುವೆ ಮುಕ್ತರೊಳು ಮುಕ್ತಿಗಳವಲ್ಲಿದೊ 4

ನಿನ್ನಂಥ ಮಗನ ಪಡದಮ್ಯಾಲೆ ಎನಗೆ
ಅನ್ಯಚಿಂತೆಗಳಿಲ್ಲ ಚಿಂತಾಮಣೀ
ಘನ್ನಮೂರುತಿ ನಮ್ಮ ವಿಜಯವಿಠ್ಠಲರೇಯ
ಅನಂತಕಾಲಕ್ಕೆ ವಹಿಸುವ ದೇವ 5
**********