Showing posts with label ಹನುಮ ಭೀಮ ಮಧ್ವಮುನಿಯೆ ಪ್ರಣತಪಾಲಕ jayesha vittala. Show all posts
Showing posts with label ಹನುಮ ಭೀಮ ಮಧ್ವಮುನಿಯೆ ಪ್ರಣತಪಾಲಕ jayesha vittala. Show all posts

Friday, 27 December 2019

ಹನುಮ ಭೀಮ ಮಧ್ವಮುನಿಯೆ ಪ್ರಣತಪಾಲಕ ankita jayesha vittala

ಶ್ರೀ ಜಯೇಶವಿಠಲರ ಕೃತಿ 

 ರಾಗ ಮಧ್ಯಮಾವತಿ           ಆದಿತಾಳ 

ಹನುಮ ಭೀಮ ಮಧ್ವಮುನಿಯೆ ಪ್ರಣತಪಾಲಕ ॥ ಪ ॥
ಜನುಮ ಜನುಮದಲ್ಲಿ ಸಲಹೋ ಪ್ರಣಯಪೂರ್ವಕ ॥ ಅ ಪ ॥

ವಾಸುದೇವ ದೋಷದೂರ ಈಶ ಸರ್ವೇಶ ।
ಈ ಸಮಸ್ತ ಜಗಕೆ ಎಂದೂ ಸೂಸಿ ಉಲ್ಲಾಸ ॥
ರಾಶಿವೇದ ಸಮ್ಮತಿ ತೋರಿ ಮಾಸದ್ಹರುಷ ।
ದಾಸವರ್ಗಕ್ಕಿತ್ತೆ ಕರುಣರಾಸಿ ದಿನೇಶ ॥ 1 ॥

ಭಾರತೀಶ ಶೌರಿದಾಸ ನಿನ್ನ ಶ್ರೀಪಾದ - ।
ವಾರಿಜಾವೆ ಗತಿಯೋ ಎನಗೆ ಭೂರಿಪ್ರಮೋದ ॥
ಹಾರೈಸೂವೆ ಹರಿಯ ಸಾಕ್ಷಿ ನಿನ್ನ ಪ್ರಸಾದ ।
ಬ್ಯಾರೆ ಒಲ್ಲೆ ಬಯಲುಭೋಗ ಧೀರ ಸುಬೋಧ ॥ 2 ॥

ಈಶ ಗರುಡ ಶೇಷಾದ್ಯಾರ ಈಶ ಗುರುವೆ ।
ಆಸೆ ನಿನ್ನ ಕರುಣಕವಚ ಬಯಸುವೆ ಪ್ರಭುವೆ ॥
ಶ್ರೀಶನಲ್ಲಿ ವಿಶೇಷ ಗುಣರಾಶಿ ತೋರುವೆ ।
ಆ ಸೌಭಾಗ್ಯ ಮೀಸಲು ಮಾಡಿ ದಾಸರಿಗುಣಿಸುವೆ ॥ 3 ॥

ಲಕ್ಷ್ಮೀಪುತ್ರ ಲಕ್ಷಣಪೂರ್ಣಧ್ಯಕ್ಷ ಹರಿದೀಕ್ಷ ।
ರಕ್ಷೀಸೆನ್ನ ರುಕ್ಷಿಣಿನಾಥನ ಇತ್ತು ಅಪರೋಕ್ಷ ॥
ಅಕ್ಷಿಗೆ ಗೋಚರನಾಗೋ ಸ್ವಾಮಿ ಮೋಕ್ಷದ ಸುರವೃಕ್ಷ ।
ನಿಕ್ಷೇಪನು ನೀ ಸುಜನರಿಗೆಂದು ಉಪಕ್ಷಿಸದಿಡು ಭಿಕ್ಷ ॥ 4 ॥

ವೇದೋಕ್ತಾದ ಗುರುವೇ ಪೂರ್ಣಬೋಧಮುನಿವರ ।
ಬಾದರಾಯಣ ಜಯೇಶವಿಠ್ಠಲ ಪಾದ ಮಧುಕರ ॥
ಪ್ರಾದುರ್ಭಾವ ಮಾಡೋ ತವ ಪ್ರಸಾದಪ್ರಚುರ ।
ಹೇ ದಯಾಬ್ಧಿ ಕರುಣ ನೀಡು ಭಕ್ತಿಸಾಗರ ॥ 5 ॥
***

ಹನುಮ ಭೀಮ ಮಧ್ವ ಮುನಿಯೆ ಪ್ರಣತಪಾಲಕ ॥ ಪ ॥
ಜನುಮ ಜನುಮದಲ್ಲಿ ಸಲಹೋ ಪ್ರಣಯಪೂರ್ವಕ ॥ ಅ ಪ ॥

ವಾಸುದೇವ ದೋಷ ದೂರ ಈಶ ಸರ್ವೇಶ
ಈ ಸಮಸ್ತ ಜಗಕೆ ಎಂದೂ ಸೂಸಿ ಉಲ್ಲಾಸ
ರಾಶಿವೇದ ಸಮ್ಮತಿ ತೋರಿ ಮಾಸದ್ಹರುಷ
ದಾಸವರ್ಗಕ್ಕಿತ್ತೆ ಕರುಣರಾಸಿ ದಿನೇಶ ॥ 1 ॥

ಭಾರತೀಶ ಶೌರಿದಾಸ ನಿನ್ನ ಶ್ರೀಪಾದ –
ವಾರಿಜಾವೆ ಗತಿಯೋ ಎನಗೆ ಭೂರಿಪ್ರಮೋದ
ಹಾರೈಸೂವೆ ಹರಿಯ ಸಾಕ್ಷಿ ನಿನ್ನ ಪ್ರಸಾದ
ಬ್ಯಾರೆ ಒಲ್ಲೆ ಬಯಲುಭೋಗ ಧೀರ ಸುಬೋಧ ॥ 2 ॥

ಈಶ ಗರುಡ ಶೇಷಾದ್ಯಾರ ಈಶ ಗುರುವೆ
ಆಸೆ ನಿನ್ನ ಕರುಣಕವಚ ಬಯಸುವೆ ಪ್ರಭುವೆ
ಶ್ರೀಶನಲ್ಲಿ ವಿಶೇಷ ಗುಣರಾಶಿ ತೋರುವೆ
ಆ ಸೌಭಾಗ್ಯ ಮೀಸಲು ಮಾಡಿ ದಾಸರಿಗುಣಿಸುವೆ ॥ 3 ॥

ಲಕ್ಷ್ಮೀ ಪುತ್ರ ಲಕ್ಷಣಪೂರ್ಣಧ್ಯಕ್ಷ ಹರಿದೀಕ್ಷ
ರಕ್ಷೀಸೆನ್ನ ರುಕ್ಷಿಣಿನಾಥನ ಇತ್ತು ಅಪರೋಕ್ಷ
ಅಕ್ಷಿಗೆ ಗೋಚರನಾಗೋ ಸ್ವಾಮಿ ಮೋಕ್ಷದ ಸುರವೃಕ್ಷ
ನಿಕ್ಷೇಪನು ನೀ ಸುಜನರಿಗೆಂದು ಉಪಕ್ಷಿಸದಿಡು ಭಿಕ್ಷ ॥ 4 ॥

ವೇದೋಕ್ತಾದ ಗುರುವೇ ಪೂರ್ಣಬೋಧ ಮುನಿವರ
ಬಾದರಾಯಣ ಜಯೇಶವಿಠ್ಠಲ ಪಾದ ಮಧುಕರ
ಪ್ರಾದುರ್ಭಾವ ಮಾಡೋ ತವ ಪ್ರಸಾದಪ್ರಚುರ
ಹೇ ದಯಾಬ್ಧಿ ಕರುಣ ನೀಡು ಭಕ್ತಿಸಾಗರ ॥ 5 ॥
***


Hanuma bhīma madhva muniye praṇatapālaka॥ pa॥

januma janumadalli salahō praṇayapūrvaka॥ a pa॥

vāsudēva dōṣa dūra īśa sarvēśa

ī samasta jagake endū sūsi ullāsa

rāśivēda sam’mati tōri māsad’haruṣa

dāsavargakkitte karuṇarāsi dinēśa॥ 1॥

bhāratīśa śauridāsa ninna śrīpāda –

vārijāve gatiyō enage bhūripramōda

hāraisūve hariya sākṣi ninna prasāda

byāre olle bayalubhōga dhīra subōdha॥ 2॥

īśa garuḍa śēṣādyāra īśa guruve

āse ninna karuṇakavaca bayasuve prabhuve

śrīśanalli viśēṣa guṇarāśi tōruve

ā saubhāgya mīsalu māḍi dāsariguṇisuve॥ 3॥

lakṣmī putra lakṣaṇapūrṇadhyakṣa haridīkṣa

rakṣīsenna rukṣiṇināthana ittu aparōkṣa

akṣige gōcaranāgō svāmi mōkṣada suravr̥kṣa

nikṣēpanu nī sujanarigendu upakṣisadiḍu bhikṣa॥ 4॥

vēdōktāda guruvē pūrṇabōdha munivara

bādarāyaṇa jayēśaviṭhṭhala pāda madhukara

prādurbhāva māḍō tava prasādapracura

hē dayābdhi karuṇa nīḍu bhaktisāgara॥ 5॥
******