ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ
ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1
ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2
ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
****