Showing posts with label ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ gurumahipati. Show all posts
Showing posts with label ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ gurumahipati. Show all posts

Wednesday, 1 September 2021

ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ 

ಕೂಡಿಸಿ ತವ ಚರಿತಾಮರ ಗಂಗಾ | ಮಾಡುವದು ಭವಭಂಗಾ1 

ಮೂಡಲುದಯದಲಿ ಜ್ಞಾನಪತಂಗಾ | ಓಡುದು ತಮ ಅಂತರಂಗಾ 2 

ಸುಗಮದಿ ಗುರುಮಹಿಪತಿ ಪ್ರಭು | ಕಂಗಳಿಗೆ ದೋರುವುದು ಸುಖದಂಗಾ3

***