Showing posts with label ವರವ ಕೊಡೆ ತಾಯೇ ವರಲಕ್ಷ್ಮೀ ವರಗಿರಿ ತಿಮ್ಮಪ್ಪನ ರಾಣಿ ದಯವ ತೋರೇ venkatanatha. Show all posts
Showing posts with label ವರವ ಕೊಡೆ ತಾಯೇ ವರಲಕ್ಷ್ಮೀ ವರಗಿರಿ ತಿಮ್ಮಪ್ಪನ ರಾಣಿ ದಯವ ತೋರೇ venkatanatha. Show all posts

Wednesday 1 September 2021

ವರವ ಕೊಡೆ ತಾಯೇ ವರಲಕ್ಷ್ಮೀ ವರಗಿರಿ ತಿಮ್ಮಪ್ಪನ ರಾಣಿ ದಯವ ತೋರೇ ankita venkatanatha

 ..

ಶ್ರೀ ವರ ಮಹಾಲಕ್ಷ್ಮೀ ಸ್ತುತಿ

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ....


ವರವ ಕೊಡೆ ತಾಯೇ ವರಲಕ್ಷ್ಮೀ ।

ವರಗಿರಿ ತಿಮ್ಮಪ್ಪನ ರಾಣಿ -

ದಯವ ತೋರೇ ।। ಪಲ್ಲವಿ ।।

ಪಂಚಾಕ್ಷರಿ ಪಂಚ-

ಪ್ರಾಣಧಾರನ ವಲ್ಲಭೇ ।

ಪಂಚಭೇದ ಮತ -

ಜ್ಞಾನವ ಕೊಡಮ್ಮಾ ।। ಚರಣ ।।

ಪದ್ಮಮುಖಿ ಪದುಮೆ -

ಪದ್ಮನಾಭನ ಪ್ರಿಯೇ ।

ಪದ್ಮಭವ ನುತ -

ಪದ್ಮೇಶನ ತೋರಮ್ಮಾ ।। ಚರಣ ।।

ಸಿಂಧು ಸುತೆಯ ಬಾರಮ್ಮಾ ।

ಚಂದ್ರ ಸಹೋದರಿ -

ಪೊರೆಯಮ್ಮಾ ।। ಚರಣ ।।

ಇಂದು ಮುಖಿಯಳೇ ನೋಡಮ್ಮಾ ।

ಸಿಂಧುಶಯನನ ಪಾದ -

ಸೇವೆಯ ನೀಡಮ್ಮಾ ।। ಚರಣ ।।

ಮಧ್ವರಾಯರ ಮುದ್ದಿನ ತಾಯೇ ।

ಮೋದದಿ ನೀ ಯೆನ್ನ ಕಾಯೇ ।। ಚರಣ ।।

ಶುದ್ಧ ಮನದಲಿ ನಿನ್ನ ಪತಿ -

ವೇಂಕಟನಾಥನ  ಭಜಿಸುವ ।

ವೈಧಾತೃ ಜ್ಞಾನವ ಕರುಣಿಸಮ್ಮಾ ।। ಚರಣ ।।

" ವಿವರಣೆ "

ವರಗಿರಿ = ತಿರುಪತಿ

ಪಂಚಾಕ್ಷರೀ = ಕೃಷ್ಣಾಯ ನಮಃ

" ಪಂಚಪ್ರಾಣಾಧಾರ "

ಪ್ರಾಣ - ಅಪಾನ - ಸಮಾನ - ಉದಾನ - ವ್ಯಾನ ಎಂಬ 5 ಪ್ರಾಣಗಳಲ್ಲಿ ವ್ಯಾಪ್ತನಾದ ಶ್ರೀಮಹಾವಿಷ್ಣು

ಪದ್ಮಮುಖಿ = ಕಮಲದಂತಾ ಕಣ್ಣುಗಳುಳ್ಳವಳು

ಪದ್ಮಭವ = ಶ್ರೀ ಚತುರ್ಮುಖ ಬ್ರಹ್ಮದೇವರು

ಸಿಂಧು ಸುತೆ = ಸಮುದ್ರರಾಜನ ಮಗಳು

ವೈಧಾತೃ ಜ್ಞಾನ = ಬ್ರಹ್ಮ ಜ್ಞಾನ

ನಾಡಿನ ಸಕಲ ಸಾಧು ಸಜ್ಜನರಿಗೆ ಶ್ರೀ ವರಮಹಾಲಕ್ಷ್ಮೀದೇವಿಯರು ಸಕಲ ಸಂಪತ್ತು - ಆಯುರಾರೋಗ್ಯ ಕೊಟ್ಟು ರಕ್ಷಿಸಲೆಂದು "ಪ್ರಾರ್ಥಿಸುತ್ತಾ"- acharya nagaraju haveri

***