ರಾಗ: ಮಧ್ಯಮಾವತಿ ತಾಳ: ಏಕ
ಕೊಡು ಬೇಗಭೀಷ್ಟವ ತ್ವರದಿ1 ನೀ ಸನ್ಮನದಿ ಪ
ಕೊಡುವೊನೆನುತ ನಿನ್ನಡಿಯನು ಭಜಿಸುವ
ಬಡವನ ಕರವನು ಪಿಡಿದೀ ಕಾಲದಿ ಅ.ಪ
ಒಡೆಯ ನೀನೆನುತತಿಹರುಷದಲಿ ನಂಬಿದೆ ನಿನ್ನ2
ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ
ಪಿಡಿದು ಭವಶ್ರಮ ಕಳಿಯುತಲಿ ಬಹು ತೋಷದಲಿ3
ನುಡಿದ ವಚನವ ಚಿತ್ತಕೆ ತಂದು
ಪೊಡವಿ ಪತಿ ಗುರುರಾಯನೆ ನೀ 1
ನಮಿಪ ಜನರಿಗೆ ಸುರಧೇನು ಭಜಿಪ ಜನಕೆ
ಅಮರೋತ್ತಮ ಸುರತರು ನೀನು ಚಿಂತಿಪ ಜನಕೆ
ಸುಮನೋಹರರತ್ನ ನೀನು ಎನುತಲಿ ನಾನು
ಅಮಿತ ಮಹಿಮೆಯ ತೋರುತಲೀಗ
ಪ್ರಮಿತನ ಮಾಡೆಲೊ ಸುಮಹಿತ ನೀ4 2
ಭೂತಳ ಮಧ್ಯದಲತಿಖ್ಯಾತನೆನಿಸಿದನಾಥ5
ಪಾತಕ ಕುಲವನ ನಿರ್ಧೂತ ಮಾಡುತ ನಿಜಪದ
ದೂತಜನತತಿ ಮನೋರಥ ಪೂರ್ತಿಪ ದಾತ
ವಾತ ಗುರುಜಗನ್ನಾಥವಿಠಲಗತಿ
ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ 3
***
..
ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ
ಕೊಡುವೊದೆನುತ ನಿನ್ನಡಿಯನು ಭಜಿಸುವ
ಬಡವನ ಕರವನು ಪಿಡಿದೀ ಕಾಲದೀ ಅ.ಪ
ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ
ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ
ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ
ನುಡಿದ ವಚನವ ಚಿತ್ತಕೆ ತಂದು
ಪೊಡವಿ ಪತಿ ಗುರುರಾಯನೆ ನೀ 1
ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ
ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ
ಅಮರೋತ್ತಮ ರತುನವು ನೀನು - ಎನುತಲಿ ನಾನು
ಅಮಿತ ಮಹಿಮವ ತೋರುತಲೀಗ
ಶ್ರಮವ ಕಳೆದು ಸುಖಸುರಿಸುತ ನೀ 2
ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ
ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ
ದೂತಜನ ತತಿಮನೋರಥ - ಪೂರ್ತಿಪ ದಾತಾ
ವಾತ ಗುರುಜಗನ್ನಾಥ ವಿಠಲಗತಿ
ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
***
1 ಕೋಡು ಬ್ಯಾಗಿಷ್ಟಾರ್ಥವ ಕರದೀ;
2 ನಂಬಿದ ಎನ್ನಾ;
3 ಮೋದದಲಿ;
4 ಶ್ರಮವ ಕಳೆದು ಸುಖ ಸುರಿಸುತ ನೀ;
5 ದಾತ; - ಪಾಠ
***