Showing posts with label ಇಂದು ನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲ prasannavenkata. Show all posts
Showing posts with label ಇಂದು ನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲ prasannavenkata. Show all posts

Friday 8 November 2019

ಇಂದು ನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲ ankita prasannavenkata

by ಪ್ರಸನ್ನವೆಂಕಟದಾಸರು
ಇಂದು ನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲ
ಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.

ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ 
ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1

ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2

ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3

ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4

ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5

ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6

ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7

ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8

ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
*******