Showing posts with label ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ jayesha vittala. Show all posts
Showing posts with label ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ jayesha vittala. Show all posts

Thursday, 5 August 2021

ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ankita jayesha vittala

 ..

ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ


ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ


ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ

ಥಂಡ ಥಂಡದಿ ನಿನ್ನ ಲೀಲ ಜಾಲ

ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು

ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ 1


ನಾಯಿಯಂದದಿ ವಿಷಯಕ್ಹಾರುವುದು ಈ ಮನಸು

ದಾಯಾದಿಗಳ ವಶದಿ ಸಿಕ್ಕಿ ಸತತ

ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು

ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ 2


ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ

ನಿಗಮ ವೇದ್ಯ ಜಯೇಶವಿಠಲರಾಯ

ಸುಗಮ ನೀನೆಂದು ಶ್ರುತಿ ಪೊಗಳುವದು ಅನುಗಾಲ

ಖಗಧ್ವಜ ಪರೆ ತೆಗೆದು e್ಞÁನ ಚಕ್ಷುಸು ನೀಡು 3

***