Showing posts with label ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ramesha. Show all posts
Showing posts with label ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ramesha. Show all posts

Wednesday, 4 August 2021

ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ankita ramesha

ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ಬಗೆಯ ಕಾಣೆರಂಗ ಪ.


ಅನ್ಯಾಯ ನ್ಯಾಯವೆಂಬುದಿನ್ನು ನೀ ಅರಿಯೆಲೊಮನ್ನೆಯಳ ವೀಳ್ಯ ಹಿಡಿದೆಯಲ್ಲೊನೀ ಹಿಡಿದೆಯಲ್ಲೊ ರಂಗ1

ಭರದಿ ಕೋಪಿಸಿ ಭೀಷ್ಮ್ಮೆ ತಿಳುವಳಿಕೆ ನಿನಗಿಲ್ಲಹರದೆಯರಿಬ್ಬರು ಎನಗೆ ಸರಿಯರಲ್ಲಎನಗೆ ಸರಿಯರಲ್ಲ ಭೀಷ್ಮ್ಮೆ ದೂರುವರೇನೆ2

ಹೀಂಗೆ ಯಾರೂ ನಗರೇನ ಭೀಷ್ಮ್ಮೆಇರುವೆಗಿಂತ ಕಡಿ ಮಾಡಿದೆಲ್ಲಎನ್ನ ಕಡಿಮಾಡಿದೆಲ್ಲ 3

ಅತಿ ಕೋಪದಿಂದ ಭೀಷ್ಮೆ ಸ್ಮøತಿಯಿಲ್ಲ ನಿನಗಿನ್ನುಸತಿಯರಿಬ್ಬರು ಎನಗೆ ಸರಿಯರಲ್ಲಎನಗೆ ಸಮರಲ್ಲ4

ಅಕ್ಕ ತಂಗಿಯರೆಂಬೊ ದಿಕ್ಕಿನ ಮೂಲೆಗೆ ಬೆಕ್ಕಿನಕಿಂತ ಕಡಿ ಮಾಡಿದೆಲ್ಲೊಎನ್ನ ಮಾಡಿದೆಲ್ಲೊ ರಂಗಾ 5

ವಾರಿಜಾಮುಖಿ ಎನಗೆ ಯಾರು ಹಿರಿಯರು ಹೇಳೆನಾರಿಯರಿಬ್ಬರು ಎನಗೆ ಪೊರರಲ್ಲಎನಗೆ ಪೊರರಲ್ಲ್ಲ 6

ಹುಡುಗಿಯರೆಂಬುವನುಡಿಯ ಕೇಳುತ ಭೀಷ್ಮಿಕಡುಹರುಷ ಬಡುತಲೆ ಮನದೊಳಗೆತನ್ನ ಮನದೊಳಗೆ7

ಕೃಷ್ಣನ ಮಡದಿಯರು ಎಷ್ಟು ಗುಣವಂತರೆಂದುಅಷ್ಟ್ಟೂರಕ್ಕಿಂತ ಮೊದಲೆ ಮದಿವ್ಯಾದೆನಿಮ್ಮನ್ನು ಮದುವ್ಯಾದೆ8

ಸಿಟ್ಟು ಬಿಟ್ಟಿಬ್ಬರು ಕೃಷ್ಣ ನಮ್ಮವನೆನ್ನಿಧಿಟ್ಟಿ ರಾಮೇಶ ಸಕಲೇಷ್ಟವೆನ್ನಿಸರ್ವೇಷ್ಟವೆನ್ನಿ9

***