.. by ಗುರುಪ್ರಾಣೇಶ ವಿಠಲ
ಪಾಹಿ ಪಂಢರಿರಾಯಾ | ಮಾಂ |ಪಾಹಿ ಪಾಂಡವ ಪ್ರೀಯಾ ಪ
ಹಿಂದೆ ನಾನು ನಿನ್ನಾ | ದರುಶನ |ಕೆಂದು ಬಂದು ಘನ್ನಾ ||ನಂದದಿ ನಿಂದವನಾ | ರಕ್ಕಿಸಿಮುಂದೆ ನಲಿದೆ ಚೆನ್ನಾ 1
ಅಷ್ಟೆ ಮಾತ್ರ ಸಾಕು | ದುರಿತಗ |ಳಟ್ಟಿ ಕಾಯಬೇಕು ||ಮಟ್ಟು ಮಾಡಬೇಕು | ವಿಷಯಗ |ಳಟ್ಟಿ ಹಾಕಿ- ನೂಕು 2
ಮರುತ ಮತದೊಳಿಟ್ಟು | ನಿನ್ನನು |ಸ್ಮರಿಪ ಭಾಗ್ಯಕೊಟ್ಟು ||ಗುರು ಪ್ರಾಣೇಶ ವಿಠಲ | ನಿನ್ನವನೆಂದುಕರ ಪಿಡಿದು ಕರೆಯೋ 3
****