by yadugiriyamma
ಜಯಮಂಗಳಂ ನಿತ್ಯ ಶುಭಮಂಗಳಂ ಪ
ನಿಂದು ತುಂಗಾತೀರದಲಿ ಮಂದರಗಿರಿಯಲ್ಲಿ
ಬಂದು ಜಮದಗ್ನಿಗಳಿಗೊಲಿದು
ಬಂದು ನಿಮ್ಮಯ ಸೇವೆ ಮಾಡಿದ ಭಕ್ತರಿಗೆ ಆ
ನಂದ ಪದವಿಯನೀವ ಇಂದಿರೇಶನಿಗೆ 1
ಅಂದು ಗೌತಮಸತಿಯ ಇಂದ್ರನು ಮೋಹಿಸಿ
ಬಂಧನಕ್ಕೊಳಗಾಗೆ ಬಂದು ನಿಮ್ಮ
ಪಾದಸೇವೆಯ ಮಾಡೆ ಪಾಪವೆಲ್ಲವ ಕಳೆದು
ಅಮರಪದವೀವ ನಿತ್ಯಪರಮಪುರಷನಿಗೆ2
ಇಂದ್ರಗಿರಿ ಮಹೇಂದ್ರತೀರ್ಥವೆಂದೆನುತ ಆ
ನಂದದಿಂದಲೆ ಪ್ರವಾಸ ಮಾಡೀ
ಬಂದು ಸ್ನಾನ ಪಾನ ಸೇವೆ ಮಾಡಿದವರ
ಜಾರದೋಷದ ಕಳೆವ ಶ್ರೀನಿವಾಸನಿಗೆ 3
****