Showing posts with label ಮಹಿಮೆ ಸಾಲದೇ ಇಷ್ಟೇ ಮಹಿಮೆ ankita shree krishna MAHIME SAALADE ISHTE MAHIME SRIPADARAJA STUTIH. Show all posts
Showing posts with label ಮಹಿಮೆ ಸಾಲದೇ ಇಷ್ಟೇ ಮಹಿಮೆ ankita shree krishna MAHIME SAALADE ISHTE MAHIME SRIPADARAJA STUTIH. Show all posts

Friday, 27 December 2019

ಮಹಿಮೆ ಸಾಲದೇ ಇಷ್ಟೇ ಮಹಿಮೆ ankita shree krishna MAHIME SAALADE ISHTE MAHIME SRIPADARAJA STUTIH






ಮಹಿಮೆ ಸಾಲದೆ ಇಷ್ಟೇ ।
ಮಹಿಮೆ ಸಾಲದೆ ।। ಪಲ್ಲವಿ ।। 

ಅಹಿಶಯನನ ಒಲುಮೆಯಿಂದ ।
ಮಹಿಯೊಳಮ್ಮೆ ಶ್ರೀಪಾದರಾಯರ ।। ಅ. ಪ ।। 

ಮುತ್ತಿನ ಕವಚ ಮೇಲ್ಕುಲಾವಿ ।
ರತ್ನ ಕೆತ್ತಿದ ರತ್ನ ಕುಂಡಲ ।
ಕಸ್ತೂರಿ ತಿಲಕ ಶ್ರೀಗಂಧಲೇಪನ ।
ವಿಸ್ತಾರದಿಂದ ಮೆರೆದು ಬರುವ ।। ಚರಣ ।। 

ವಿಪ್ರಗೆ ಬ್ರಹ್ಮಹತ್ಯ ದೋಷ ಬರಲು ।
ಕ್ಷಿಪ್ರ ಶಂಖೋದಕದಿ ಕಳೆಯೆ ।
ಅಪ್ರಬುದ್ಧರು ದೋಷಿಸೆ ಗೇರೆಣ್ಣೆ ।
ಕಪ್ಪು ವಸನ ಹಸನ ಮಾಡಿದ ।। ಚರಣ ।। 

ಹರಿಗೆ ಸಮರ್ಪಿಸಿದ ನಾನಾ ।
ಪರಿಯ ಶಾಕಗಳನು ಭುಂಜಿಸೆ ।
ನರರು ನಗಲು ಶ್ರೀಶ ಕೃಷ್ಣನ ।
ಕರುಣದಿಂದ ಹಸಿಯ ಮಾಡಿದ ।। ಚರಣ ।। 
*** 

ರಾಗ : ತೋಡಿ ರಾಗ : ಆದಿ (raga, taala may differ in audio)

Mahime saalade | ishte mahime saalade || pa ||

Ahishayanana olumeyinda mahiyolemma shreepaadaraajara || a.pa. ||

Muttina kavaca mel turaayi navaratna kettida karna kundala |
kastoori tilaka shreegandha lepana vistaaradinda meredu baruva || 1 ||

Viprage brahmahatya dosha baralu kshipra shankhodakadi kaleye |
apra baddharu doshise gerenne kappu vasana hasana maadida || 2 ||

Harige samarpisida naanaa pariya shaakamgalanu bhunjise |
nararu nagalu shree krushnana parama karunadinda husiya maadida || 3 ||
***


ಮಹಿಮೆ ಸಾಲದೇ ?
ಇಷ್ಟೇ ಮಹಿಮೆ ಸಾಲದೇ? ||ಪಲ್ಲವಿ||

ಅಹಿಶಯನನ ಒಲುಮೆಯಿಂದ
ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ||

ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ ||೧||

ವಿಪ್ರಗೆ ಬ್ರಹ್ಮ ಹತ್ಯೆ ದೋಷ ಬರಲು ಕ್ಷಿಪ್ರ ಶಂಖೋದಕದಿ ಕಳೆಯೆ
ಅಪ್ರಬುದ್ಧರು ದೂಷಿಸೆ, ಗೇರೆಣ್ಣೆ ಕಪ್ಪು ವಸನ ಹಸನ ಮಾಡಿದ ||೨||

ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಕಂಗಳನು ಭುಂಜಿಸೆ
ನರರು ನಗಲು ಶ್ರೀಶ ಕೃಷ್ಣನ ಕರುಣದಿಂದ ಹಸಿಯ ಮಾಡಿದ ||೩||
***

ಇಷ್ಟೇ ಮಹಿಮೆ ಸಾಲದೆ 

ಪ್ರಾತಃ ಸ್ಮರಣೀಯರಾದ ಸಂನ್ಯಾಸ ಕುಲದೀಪರಾದ ಯತಿಕುಲಶಿರೋರತುನರಾದ ಶ್ರೀ ಶ್ರೀ ಪಾದರಾಜರು ಪರಮಾದ್ಭುತವಾಗಿ ಬೆಳಗಿದ ಪರಂಪರೆಯು ಇಂದು ನಮಗೆಲ್ಲರಿಗು ಆಗರವಾಗಿದೆ 

ಅಷ್ಟಿಷ್ಟಲ್ಲದೆ ಎಷ್ಟೇಷ್ಟೋ ಮಹಿಮೆಗಳನ್ನು ಮತ್ತಷ್ಟು ತೋರಿದ ಮಹಾನುಭಾವರು ಇವರು, ಅಬ್ಬುರು ವಾಸಿಗಳಾದ ಶೇಷಗಿರಿಯಾಚಾರ್ಯ ಮತ್ತು ಗಿರಿಯಮ್ಮನ ಗರ್ಭೋದಯದಲ್ಲಿ ಚಂದ್ರೋದಯದಹಾಗೆ ಪೂರ್ಣಚಂದ್ರನಂತೆ ಜನಿಸಿದ ಧ್ರುವಾಂಶಸಂಭೂತರು, 1406ರಲ್ಲಿ ಅವತರಿಸಿದ ಮಹಾನ್ ಚೈತನ್ಯ. 

ಸ್ವರ್ಣವರ್ಣತೀರ್ಥರ ಕನಸಿನಕೂಸಾಗಿ ಶ್ರೀ ಲಕ್ಷ್ಮೀನಾರಾಯಾಣತೀರ್ಥರಾದರು ಮುಂದೆ ಶ್ರೀ ವಿಭುದೇಂದ್ರತೀರ್ಥರ ಶಿಷ್ಯನಾಗಿ ಶ್ರೀ ಪಾದರಾಜರೆಂದು ಬಿರುದನ್ನು ಪಡೆದು ಯತಿಕುಲಕ್ಕೆ ಮುಕುಟಪ್ರಾಯರಾದರು. 

ಮುಳಬಾಗಿಲಿನಲ್ಲಿ ಮೊಟ್ಟಮೊದಲ ಭಾರಿಗೆ ವಿದ್ಯಾಪಿಠ ಸ್ಥಾಪನೆ ಮಾಡಿದ ಧೀರರು, ಇಂತಹ ಮಹಾನುಭಾವರ ಕೆಲವು ಮಹಿಮೆಗಳನ್ನು ತಿಳಿದು ಧನ್ಯರಾಗೋಣ 

ಮಹಿಮೋಪೇತರಾದ ಶ್ರೀಪಾದರಾಜರ ದಿವ್ಯ ದರ್ಶನ ನಮಗಾಗಬೇಕಾದರೆ ಅವರ ವಿದ್ಯಾಶಿಷ್ಯರಾದ ವ್ಯಾಸರಾಜರು ವಾದಿರಾಜರು ಮತ್ತು ವಿಜಯೀಂದ್ರರ ತೀರ್ಥರ ಕೃತಿಗಳಲ್ಲಿ ಅದ್ಭುತವಾಗಿ ಅವರ ಪ್ರತಿಭೆಯನ್ನು ಅವುಗಳು ತೆರೆದಿಡುತ್ತವೆ 

ವ್ಯಾಸರಾಜರ ಕೃತಿಯಾದ ಮಹಿಮೆ ಸಾಲದೆ ಇಷ್ಟೇ ಅನ್ನುವ ಕೃತಿ ಪುಟ್ಟದಾದರು ಅದರೊಳಗಿನ ಅರ್ಥ ಬೆಟ್ಟದಷ್ಟು ಇದೆ 

ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ 
ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ 

ಮೊದಲ ನುಡಿಯಲ್ಲಿ ಮುತ್ತಿನ ಕವಚ ಮೇಲ್ಕುಲಾವಿ ರತ್ನಕೆತ್ತಿದ ಕರ್ಣಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ 

ಶ್ರೀ ಪಾದರಾಜರು ಹೇಗಿದ್ದರು ಅಂತ ಅದ್ಭುತವಾಗಿ ವ್ಯಾಸರಾಜರು ನಿರೂಪಣೆ ಮಾಡಿದ್ದಾರೆ ಸಾಳುವ ರಾಜನಾದ ಚಂದ್ರಗಿರಿಯರಸನಾದ ನರಸಿಂಹನಿಂದ ರತ್ನಾಭಿಷೇಕ ಮಾಡಿಸಿಕೊಂಡು ಸುಶೋಭಿತರಾಗಿ ಎಲ್ಲರಿಗು ಅಭಯಪ್ರದರಾಗಿ ಬರುತ್ತಿದ್ದಾರೆ ಎನುವುದು ಮೊದಲ ನುಡಿಯಲ್ಲಿ ಕಾಣ ಬಹುದು 

ವಿಪ್ರಗೆ ಬ್ರಹ್ಮಹತ್ಯ ದೋಷ ಬರಲು 
ಕ್ಷಿಪ್ರ ಶಂಖೋದಕದಿ ಕಳೆಯೆ 
ಅಪ್ರಬುದ್ಧರು ದೋಷಿಸೆ ಗೇರೆಣ್ಣೆ 
ಕಪ್ಪುವಸನ ಹಸನ ಮಾಡಿದ 

ಒಬ್ಬ ಬ್ರಾಹ್ಮಣನಿಗೆ ಬ್ರಹ್ಮಹತ್ಯಾ ದೋಷ ಬಂದಾಗ ಅವನು ಪಶ್ಚಾತ್ತಾಪದಿಂದ ಗುರುಗಳಿಗೆ ಶರಣಾಗತನಾದಾಗ ಶ್ರೀಪಾದರಾಜರು ಅವನಿಗೆ ಅಭಯಪ್ರದಾನ ಮಾಡಿ ನಿತ್ಯವೂ ಶಂಖೊದಕದಿಂದ ಅವನ ಮೇಲೆ ಪ್ರೋಕ್ಷಿಸಿ ಅವನ ದೋಷ ನಿವಾರಣೆ ಮಾಡುತ್ತಾರೆ ಇದನ್ನು ಕೆಲವು ಅಪ್ರಬುದ್ಧರು ಸಂದೇಹಿಸಿದ್ದಾಗ ಒಂದು ಶುಭ್ರವಾದ ಬಿಳಿ ವಸ್ತ್ರವನ್ನು ಗೇರೆಣ್ಣೆಯಲ್ಲಿ ಹಾಕಿ ತಮ್ಮ ತಪ್ಪಶಕ್ತಿಯಿಂದ ಅದನ್ನು ಪುನಃ ಬಿಳಿ ಮಾಡುತ್ತಾರೆ 

ಕೊನೆಯ ನುಡಿಯಲ್ಲಿ 

ಹರಿಗೆ ಸಮರ್ಪಿಸಿದ ನಾನಾ 
ಪರಿಯ ಶಾಕಂಗಳನು ಭುಂಜಿಸಿ 
ನರರು ನಗಲು ಶ್ರೀಶ ಕೃಷ್ಣನ 
ಕರುಣದಿಂದ ಹುಸಿಯ ಮಾಡಿದ 

ಪ್ರತಿನಿತ್ಯವು ನಾನಾ ವಿಧವಾದ ಭಕ್ಷ್ಯಭೋಜ್ಯಗಳನ್ನು ಶ್ರೀಹರಿಗೆ ಸಮರ್ಪಿಸಿ ಭುಂಜಿಸುತ್ತಿದ್ದರು ಅವರ ಅಪಮೋಚ್ಚ ವೈರಾಗ್ಯವನ್ನು ಅರಿಯದೆ ನಕ್ಕ ತಿಳಿಗೇಡಿಗಳಿಗೆ ಉತ್ತರವಾಗಿ ತಾವು ಸ್ವಿಕರಿಸಿದ ಭೋಜನ ಪದಾರ್ಥಗಳನು ಯಥಾರ್ಥ ಸ್ಥಿತಿಯಲ್ಲಿ ಮತ್ತೆ ಪ್ರತಟಿಸಿದ ವೃತ್ತಾಂತವನ್ನು ಕೊನೆಯ ನುಡಿಯಲ್ಲಿ ಕಾಣಬಹುದು 

ಸರ್ಪದೊಂದಿಗೆ ಸರ್ಪ ಭಾಷೆಯಲ್ಲಿ ಮಾತಾಡಿದ್ದು ರಘುನಾಥತೀರ್ಥರು ವೈಕುಂಠ ಯಾತ್ರೆ ಮಾಡುತ್ತಿದ್ದಾಗ ಪುಷ್ಪಕವಿಮಾನದಲ್ಲಿ ಕುಳಿತ ಅವರೊಂದಿಗೆ ಸಂಭಾಷಣೆ ಮಾಡಿದ್ದು ಇವೆಲ್ಲ ಗುರುಗಳ ಮಹಾಮಹಿಮೆಗಳು ಅಷ್ಟೇ ಅಲ್ಲದೆ ದಾಸಸಾಹಿತ್ಯವನ್ನು ಅತ್ಯುನ್ನತ ಸ್ಥಾನಕ್ಕೊಯ್ಯದ ಮಹಾನುಭಾವರು 

✍🏻 ಜಮದಗ್ನಿ
***