Showing posts with label ಆವೆಂಕಟಗಿರಿ ನಿಲಯನಂಘ್ರಿ ರಾಜೀವ jagannatha vittala. Show all posts
Showing posts with label ಆವೆಂಕಟಗಿರಿ ನಿಲಯನಂಘ್ರಿ ರಾಜೀವ jagannatha vittala. Show all posts

Sunday, 15 December 2019

ಆವೆಂಕಟಗಿರಿ ನಿಲಯನಂಘ್ರಿ ರಾಜೀವ ankita jagannatha vittala

ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ)

ಆ ವೆಂಕಟಗಿರಿನಿಲಯನಂಘ್ರಿ ರಾ-
ಜೀವಯುಗ್ಮಗಳಿಗೆ ನಮಿಸುವೆನು ||ಪ||

ಸೇವಿಪ ಜನರಿಗಮರತರುವೆನಿಸಿ ಧ-
ರಾವಲಯಾಖ್ಯ ದಿವಿಯೊಳೆಸೆವ ||ಅ.ಪ||

ಆವನಂಘ್ರಿಜಲ ಸಕಲ ಜಗತ್ತಿಗೆ
ಪಾವನಕರವೆಂದೆನಿಸುವದು
ಶ್ರೀವಿಧಿಭವ ಶಕ್ರಾದ್ಯರು ಅವನ
ಸೇವಕಸೇವಕರೆನಿಸುವರು ||೧||

ದೇವೋತ್ತಮ ತಾನಾಗಿ ನಿಖಿಲ ಜಡ
ಜೀವ ಭಿನ್ನ ಕರ್ಮವ ಮಾಳ್ಪ
ಸ್ಥಾವರ ಜಂಗಮರೊಳಗೆ ನೆಲೆಸಿ ವೇ-
ದಾವಳಿಯಿಂದ ಸ್ತುತಿಸಿಕೊಂಬ ||೨||

ಮಾತರಿಶ್ವನೊಡನಹಿಪನೊರೆದ ಸ-
ತ್ವಾತಿಶಯವ ತೋರೆನುತಾಗ
ಜಾತರೂಪ ಶೈಲಾತ್ಮಜನೊಪ್ಪಿರೆ
ವೀತಿಹೋತ್ರ ಸಖ ಕಿತ್ತೊಗೆಯ ||೩||

ಪೀತಕರ್ಣನಳವಳಿದು ಸ್ತುತಿಸೆ ನಿ-
ಕೇತನತ್ರಯವ ನಿಳಿದು ಬೇಗ
ಧಾತ ಮಹಿಳೆ ತೀರ್ಥದಿ ಲಕುಮಿಸ-
ಮೇತನಾಗಿ ಮೋದಿಸುತಿಪ್ಪ ||೪||

ಭೂಸುರನೋರ್ವನು ತೊಂಡಮಾನ ಧರ-
ಣೀಶನ ನಿಲಯದಿರಿಸಿ ಸತಿಯ
ಕಾಶಿಗೆ ಪೋಗಲು ನೃಪತಿ ಮರೆಯೆ ನಿ-
ಶ್ವಾಸವನೈದಿದಳಾ ಸತಿಯು ||೫||

ಆ ಸಮಯದಿ ದ್ವಿಜವರ್ಯನು ಬೆಸಗೊಳೆ
ಕ್ಲೇಶದಿ ಭೂಮಿಪ ಸಂಸ್ತುತಿಸೆ
ಕೇಶವ ತಾನಸ್ಥಿಗಳ ತರಿಸಿ ಸು-
ವಾಸಿನಿ ಶಿಶುಸಹ ಒಲಿದಿತ್ತ ||೬||

ವೃದ್ಧ ಭೂಸುರನ ಒಯ್ದು ಸಲಿಲದೊಳ-
ಗದ್ದಿ ಕುಮಾರತ್ವವನಿತ್ತ
ಅಧ್ವರವೆಸಗುವ ಋಷಿಗಳ ವೇದಾ-
ಪದ್ಧವ ತಿದ್ದಿ ಮಖವ ಕಾಯ್ದ ||೭||

ಮಧ್ಯರಾತ್ರಿಯೊಳ್ಬೆಸಗೊಂಡ ನೃಪತಿಗೆ
ಸಿದ್ಧಿಸಿದರಿಶಂಖದ್ವಯವ
ಮೃದ್ಭಾಂಡವ ವಿರಚಿಸಿದವಗೊಲಿದು
ಚೋದ್ಯವ ನೃಪತಿಗೆ ತೋರಿಸಿದ ||೮||

ಮನವಾಕ್ಕಾಯದಿ ಕರ್ಮಜನ್ಯಫಲ
ದಿನದಿನಗಳಲಿ ಸಮರ್ಪಿಸುತ
ಮನುಜೋತ್ತಮರಾಧಿವ್ಯಾಧಿಗಳ ದು-
ರ್ಜನುಮಗಳೆಲ್ಲವ ಪರಿಹರಿಪ ||೯||

ಕುನರಗಲಭ್ಯನು ಕುವಲಯದೊಳು ಕಾ-
ರುಣಿಕ ಧರ್ಮಾಕರ್ಮಾರ್ಥಗಳ
ಜನರಿಗೆ ಸಲಿಸುವ ಜಗನ್ನಾಥವಿಠಲ
ಮನೆ ಮಾಡಿದ ಶೇಷಾಚಲವ ||೧೦||
***


pallavi

A venkaTagiri nilayananghri rAjIva yugmagaLige namisuvenu

anupallavi

sEvipa janariga marataruvenisi dharAvala yAkya diviyoLaseva

caraNam 1

avananghrijala sakala jagattige pAvana karavendenisuvadu
shrI vidhi bhava shakrAbdyaru avana sEvaka sEvakarenisuvaru

caraNam 2

dEvOttama tAnAdi nikhila jaDajIva bhinna karmava mALpa
sthAvara jangamaroLage nelasi vEdAvaLiyinda tutisi komba

caraNam 3

mAtarishvara noDana Ipanoreda satvApishayava tOrenutAga
jAtarUpa tailAtmajanoppire vItihOtra sakha kittogeya

caraNam 4

pIta karaNavaLi naLidu tutise nikEtana trayavaniLidu bEga
dhAta mahiLe tIrthadi lakumi samEtanAgi mOdisutippa

caraNam 5

bhUsura nOrvanu toNDamAna dharaNIshana nilayadirisi satiya
kAshige pOgalu nraoati mareye nishvAsavanaididaLA satiyu

caraNam 6

A samayadi dvijavaryanu besagoLa klEshadi bhUmipa samstustise
kEshava tAnastigaLatarisi suvAsini shishusaha oliditta

caraNam 7

vraddha bhUsurana voidu salila doLagaddi kumAratvanitta
adhvara vesaguva rSigaLa vEdApaddhava tiddi makhava kAida

caraNam 8

madhya rAtiyolkhesagoNDa nrapatige siddhasidari shankadvayava
mradbhANDava viracisidava golidu cOdyava nrapatige tOrisida

caraNam 9

manavAkAyadi karma janya phala dinadinagaLali samarpisuta
manujOttamarAdhi vyAdigaLa durjana magaLellava pariharipa

caraNam 10

kunaragalabhyanu kuvalayadoLu kAruNika dharma karmArthagaLa
janarige salisuva jagannAtha viThala mane mADida shESAcalava
***

another version

ಜಗನ್ನಾಥದಾಸರು
ಆ ವೆಂಕಟಗಿರಿ ನಿಲಯನಂಘ್ರಿ ರಾ
ಜೀವಯುಗಳಗಾನಮಿಸುವೆನು ಪ

ಸೇವಿಪ ಜನರಿಗಮರ ತರುವೆನಿಸಿ ಧ
ರಾವಲಯಾಖ್ಯ ದಿವಿಯೊಳೆಸವ ಅ.ಪ.

ನಿಖಿಳ ಜಗತ್ತಿಗೆ
ಪಾವನತರವೆಂದೆನಿಸುವುದು
ಶ್ರೀ ವಿಧಿಭವ ಶಕ್ರಾದ್ಯರು ಆವನ
ಸೇವಕ ಸೇವಕರೆನಿಸುವರು
ತಾ ಉತ್ತಮ ಪುರುಷನೆನಿಸಿ ಜಗವ ಸ
ದಾವಕಾಲ ಸಂತೈಸುವನು
ಜೀವಾಂತರ್ಗತನಾಗಿ ವಿವಿಧ ವೇ
ದಾವಳಿಯಿಂದ ತುತಿಸಿ ಕೊಂಬಾ 1

ಪಾತನೊಳಹಿಪ ವಿರೋಧಿಸೆ ತವಸ
ತ್ವಾತಿಶಯನ ತೋರೆಂದೆನುತಾ
ಜಾತರೂಪ ಶೈಲಾತ್ಮಜನಪ್ಪಿರೆ
ವೀತಿ ಹೋತ್ರ ಸಖ ಕಿತ್ತೊಗೆಯೆ
ವೀತ ಕರ್ನನಳವಳಿದು ವೇಗ
ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ
ಮೇತನಾಗಿ ಮೋದಿಸುತಿಪ್ಪೆ 2

ಭೂಸುರನೊರ್ವನು ತೊಂಡಮಾನ ಧರ
ಣೀಶÀನ ನಿಲಯದೊಳುಳುಹಿ ಸತಿಯ
ನೃಪತಿ ಮರೆಯೆ ನಿ
ಶ್ವಾಸ ವನೈದಿದಳಾ ಸತಿಯು
ಆ ಸಮಯದಿ ದ್ವಿಜವರ್ಯನು ಬೆಸಗೊಳೆ
ಕ್ಲೇಶದಿ ಭೂಮಿಪ ಸಂಸ್ತುತಿಸೆ
ಕೇಶವ ತಾನಸ್ಥಿಗಳ ತರಿಸಿ ಸು
ವಾಸಿನಿ ಶಿಶು ಸಹ ಒಲಿದಿತ್ತಾ 3

ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ
ಗದ್ದಿ ಕುಮಾರತ್ವವನಿತ್ತ
ಅಧ್ವರವೆಸಗಿದ ಋಷಿಗಳ ಮಂತ್ರದ
ಪದ್ದತಿ ತಿದ್ದಿಯಜ್ಞವ ಮಾಡ್ದ
ಮಧ್ಯರಾತ್ರಿಯೊಳು ಬೆಸಗೊಂಡ ನೃಪನು
ಪದ್ರವ ಕಳೆದಾಯುಧವಿತ್ತು
ಮೃದ್ಭಾಂಡವ ರಚಿಸುವನಿಗೊಲಿದವನ
ಚೋದ್ಯ ತೋಂಡಮಾನಗೆ ತೋರ್ದ 4

ಸಂಚಿತ ಕುಕರ್ಮಗಳ
ಮನೆಯ ಮುರಿದು ಆಗಾಮಿ ಫಲಂಗಳ
ಅನುಭವಕೀಯದೆ ಪ್ರಾರಬ್ದಾ
ಮೂರ್ತಿ ಚಿಂ
ತನೆ ಇತ್ತು ಸ್ವರೂಪಸುಖಾ
ಅನುದಿನದಲಿ ವ್ಯಕ್ತಮಾಡಿಸಿ ಕೊ
ಟ್ಟನಿಮಿತ್ತಾಪ್ತನೆನಿಸುತಿಪ್ಪ 5

ಏಕಮೇವ ರತ್ನಾಕರ ಮಂದಿರ
ಆಕೂತಿಜ ಯe್ಞÁಕರನೇ
ಲೊಕವಿಲಕ್ಷಣ ಸೂಕರಾತ್ಮ ಪಿ
ವಿನುತ ಲಕ್ಷ್ಮೀ ಕಾಂತಾ
ಗೋಕುಲ ಮಂದಿರ ಏಕಾಂತಿಗಳ ನಿ
ರಾಕರಿಸಿದೆ ಲೋಕೈಕ ಸುಖ
ಶೋಕ ರಹಿತ ನಿಜಲೋಕವಿತ್ತು ನಿ
ರಾಕುಲ ಸುಖಗಳ ತಾ ಕೊಡುವಾ 6

ದಿನಪನೊಳಗೆ ವೃಜಿನಿ ವಸು ತಾ ಎಂ
ದೆನಿಸಿ ಜಯಾಪತಿ ಪ್ರದ್ಯುಮ್ನ
ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ
ತನಗೆ ತಾನೆ ಪೂಜಕ ಪೂಜ್ಯ
ಅನುಪಮ ನಾಮದಿ ಕರೆಸುತಲಿಹ ತ
ನ್ನನು ಈ ಪರಿಧೇನಿಸುತಿಪ್ಪ
ಮನುಜರಿಗೊಲಿದು ಜಗನ್ನಾಥವಿಠ್ಠಲ
ಜನನ ಮರಣಗಳ ಪರಿಹರಿಪಾ 7
*********