Showing posts with label ಗುಮ್ಮ ಬಂದನೆಲೊ ದುರ್ಜನ ಬೇಡ rangavittala. Show all posts
Showing posts with label ಗುಮ್ಮ ಬಂದನೆಲೊ ದುರ್ಜನ ಬೇಡ rangavittala. Show all posts

Wednesday 11 December 2019

ಗುಮ್ಮ ಬಂದನೆಲೊ ದುರ್ಜನ ಬೇಡ ankita rangavittala

ಆಹರಿ ರಾಗ ತ್ರಿಪುಟ ತಾಳ
ಗುಮ್ಮ ಬಂದನೆಲೊ ದುರ್ಜನ ಬೇಡ
ಸುಮ್ಮನಿರೆಲೊ ರಂಗಯ್ಯ ||ಧ್ರುವ||

ಉಟ್ಟ ಪುಲಿತೊವಲು ತೊಟ್ಟ ಮುತ್ತಿನ ಹಾರ
ಇಟ್ಟ ಕಾಮಾಕ್ಷಿ ಕಪಾಲ ತ್ರಿಶೂಲ
ಬಟ್ಟು ಹಣೆಮೆರಿಯ(ರೆಯೆ?) ಚರಣದಲಿ ಮೆಟಿದ ಹಾವುಗೆಯ
ದಿಟ್ಟ ಮೂರುತಿ ನಿಮ್ಮ ಚರಣ ಸೇವೆಗೆ ನಿತ್ಯ ||೧||

ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯು
ಉರದಲಿ ಧರಿಸಿದ ರುಂಡಮಾಲಿಯು ತನ್ನ
ಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ-
ಭರಣಗಳು ಪರಮಮೂರುತಿ ನಿಮ್ಮ ಚರಣಸೇವೆಗೆ ನಿತ್ಯ ||೨||

ಕಾಮನ್ನ ರೂಪಕ್ಕೆ ಜರಿವ ಚನ್ನಿಗನಾಗಿ
ಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲ
ಮುಕ್ತಿಯನೀವ ಸೋಮಶೇಖರನ ಚೆಲ್ವ
ರಾಮನಾ ಭಾವ ಮೃದುವಾಕ್ಯವಿದು ಮುದ್ದು ||೩||

ಕೋಟಿ ಸೂರ್ಯರ ಕಾಂತಿ ನೀಟಾದ ತನುವಿನ
ಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದ
ಕಿಡಿಯುದುರೆ ಭೂತಗಣಂಗಳು ಕುಟಕಿಚ್ಛಕ(?) ಬೆದರೆ
ನಾಟ್ಯವನಾಡುತ ನಗುತ ಮೋಹನ ಮುದ್ದು ||೪||

ಅಂಜೆ ಕಾಣಮ್ಮ ನಾ ಅಗಲಿದವ(?) ಜೋಗಿ
ಜಂಗಮವೇಷವು ಕೈಕೊಂಡು ಮಲೆಯಾಳ
ಕೊಂಗ ಗುಜ್ಜರ ಭಾಷೆಯ ಭಾಷಿಸುತಲಿ
ರಂಗವಿಠಲನೆ ಚೆಲ್ವ ಮಂಗಳ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ ||೫||
********