Showing posts with label ದಾರೇನೆಂಬುರೈ ಹರಿ ಭಕ್ತರಿಗೆ ದಾರಲ್ಲವೆಂಬುರೈ gurumahipati. Show all posts
Showing posts with label ದಾರೇನೆಂಬುರೈ ಹರಿ ಭಕ್ತರಿಗೆ ದಾರಲ್ಲವೆಂಬುರೈ gurumahipati. Show all posts

Wednesday, 1 September 2021

ದಾರೇನೆಂಬುರೈ ಹರಿ ಭಕ್ತರಿಗೆ ದಾರಲ್ಲವೆಂಬುರೈ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ 


ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ| ಪರಮಾನಂದ ಸುಖಾ|ಸುರಸನುಂಬುವರಿಗೇ 1 

ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು| ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ 2 

ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು| ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ 3 

ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ| ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ 4 

ಅವರವರಂತೆ ಲೋಕ|ದವರಿಗೆ ತೋರುತಾ| ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ 5 

ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು| ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ 6 

ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ| ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ7

***