Showing posts with label ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ gopala vittala. Show all posts
Showing posts with label ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ gopala vittala. Show all posts

Thursday, 12 December 2019

ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ ankita gopala vittala

ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರ್ತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ |
ತರುವಾಯದಲಿನ್ನು ತರತಮ್ಯಾನುಸಾರ |
ಪರಿ ಪರಿ ಯತಿಗಳು ಇರುತಿಪ್ಪರು ಇಲ್ಲಿ | 1

ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿ ಪರಿ ಪುರಾಣ ಭಾರತ ಗಾನದಲಿ |
ಸರಿ ಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲ ವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || 2
***********