Showing posts with label ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ vijaya vittala. Show all posts
Showing posts with label ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ vijaya vittala. Show all posts

Wednesday, 16 October 2019

ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ ankita vijaya vittala

ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ |
ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು ಪ

ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು |
ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ ||
ಬೇಕೆ ಎನಗೆ ಯಿಂಥsÀ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ |
ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು 1

ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು |
ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು ||
ತೊಡರು ಕಳೆದು ಸರ್ವರೊಳಗೆ |
ನಡತಿವಂತ ಮಾಡಿದಂತೆ ಬಡವನ್ನಾ ಉದ್ಧರಿಸು ಜ್ಞಾನಿ2

ಯಿರಲಾಗಿ ಪುತ್ರನೀಗೆ ಬರುವಾವೆ
ಪಾಲಿಪದು ಎತ್ತಲಿದ್ದರೂ |
ಸತ್ಯ ವಿಜಯವಿಠ್ಠಲನ್ನ |
ತುತ್ತಿಸುವ ಮಹಾಮಹಿಮಾ 3
**********